ಉಜಿರೆ: ದೇಹ ಮತ್ತು ಮನಸ್ಸಿನ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಲು ಆರೋಗ್ಯಕರ ಆಹಾರ ಸೇವಿಸುವುದು ಅತ್ತುತ್ಯಮ ಮಾರ್ಗ ಎಂದು ಚಂದನ ವಾಹಿನಿಯ “ಥಟ್ ಅಂತ ಹೇಳಿ’ ಕಾರ್ಯಕ್ರಮದ ಕ್ವಿಜ್ ಮಾಸ್ಟರ್ ಡಾ.ನಾ.ಸೋಮೇಶ್ವರ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಸಿದ್ದವನ ಗುರುಕುಲದಲ್ಲಿ ನಡೆದ, ಶ್ರೀ ಧ. ಮಂ ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ್ದ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಪ್ರಾಯೋಜಕತ್ವದಲ್ಲಿ ಡಾ. ಬಿ.ಯಶೋವರ್ಮ ಅವರ ಸ್ಮರಣಾರ್ಥ ಉಪನ್ಯಾಸ ಮಾಲೆ “ಅರಿವಿನ ದೀವಿಗೆ” ಕಾರ್ಯಕ್ರಮದಲ್ಲಿ, “ನಮ್ಮ ಹೊಟ್ಟೆಯಲ್ಲೊಂದು ಮೆದುಳು” ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸೂಕ್ಷ್ಮಜೀವಿ ಮತ್ತು ಬ್ಯಾಕ್ಟೀರಿಯಾಗಳು ಮಾನವನ ದೈಹಿಕ ಮತ್ತು ಬೌದ್ದಿಕ ಬೆಳವಣಿಗೆಗೆ ಎಷ್ಟು ಅನೂಕೂಲವೋ ಅಷ್ಟೇ ಹಾನಿಕಾರಕಗಳಾಗಿವೆ. ನಾವು ಸೇವಿಸುವ ಪ್ರತಿ ಆಹಾರ ಪದಾರ್ಥಗಳು ಅದಕ್ಕೆ ಅವಲಂಬನೆಯಾಗಿರುತ್ತದೆ. ಇಂದಿನ ದಿನಗಳಲ್ಲಿ ಸೇವಿಸುವ ಆಹಾರಗಳಿಂದ ಸೂಕ್ಷಜೀವಿ ಮತ್ತು ಬ್ಯಾಕ್ಟೀರಿಯಾಗಳು ನಮ್ಮ ಆರೋಗ್ಯ, ಅಸ್ತಿತ್ವ, ಅನಾರೋಗ್ಯ, ವಿಚಾರ ಮತ್ತು ನಡವಳಿಕೆಗಳನ್ನು ನಿಯಂತ್ರಣ ಮಾಡುತ್ತಿರುವುದರು ದುರದೃಷ್ಡಕರ ಎಂದು ಬೇಸರ ವ್ಯಕ್ತಪಡಿಸಿದರು.
ದೇಹದ ದೈಹಿಕ ಮತ್ತು ಬೌದ್ದಿಕ ಶಕ್ತಿ ಬೆಳೆವಣಿಗೆಗೆ ನಾರು ಪದಾರ್ಥ, ತರಕಾರಿ, ಹಣ್ಣು ಮತ್ತು ಪ್ರತಿದಿನ ಮೂರು ಹೊತ್ತು ಮಜ್ಜಿಗೆ ಸೇವನೆ ಆರೋಗ್ಯಕ್ಕೆ ಉತ್ತಮ ಎಂದು ಸಲಹೆ ನೀಡಿ, ನಂತರ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶ್ರೀ ಧ. ಮಂ ಕಾಲೇಜು ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ, ಶಿಕ್ಷಣದಲ್ಲಿ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ಮನೋಧರ್ಮ, ಕೌಶಲ್ಯ, ಮತ್ತು ವಿಷಯಾಧಾರಿತ ಜ್ಞಾನ ಈ ಮೂರು ಮೂಲ ಮಂತ್ರಗಳನ್ನು ನೀಡಿದವರು ದಿವಂಗತ ಡಾ. ಬಿ. ಯಶೋವರ್ಮ ಅವರು ಎಂದರು. ಆಡಳಿತ ಕ್ಷೇತ್ರದಿಂದ ಹಿಡಿದು ವಿಜ್ಞಾನ ಕ್ಷೇತ್ರದವರೆಗೂ ಸೇವೆ ಸಲ್ಲಿಸಿದ ಕೀರ್ತಿ ಅವರದ್ದು ಎಂದು ಅಭಿಪ್ರಾಯಪಟ್ಟರು.
ಈ ಸಂಧರ್ಭದಲ್ಲಿ ಶ್ರೀಮತಿ ಸೋನಿಯಾ ಯಶೋವರ್ಮ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬೋಜಮ್ಮ. ಕೆ. ಎನ್, ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ್ ಪಿ, ಶ್ರದ್ದಾ ಅಮಿತ್, ಕಾರ್ಯಕ್ರಮ ಸಂಯೋಜಕ ಡಾ. ದಿವಾಕರ್ ಕೆ. ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಹೇಶ್ ಆರ್ ನಿರೂಪಿಸಿ, ಡಾ. ನಾಗಣ್ಣ ಡಿ, ಎಂ ವಂದಿಸಿದರು.