ಉಜಿರೆ: ಪುತ್ತೂರು ತಾಲ್ಲೂಕಿನ ನರಿಮೊಗರು ಎಂಬಲ್ಲಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಆಡಳಿತ ನಿರ್ದೇಶಕರೂ ತಜ್ಞ ವೈದ್ಯರೂ ಆದ ಡಾ. ರಾಘವೇಂದ್ರಪ್ರಸಾದ್ ಬಂಗಾರಡ್ಕ ಅವರು “ಆರೋಗ್ಯ ಪ್ರಸಾದಿನೀ” ಎಂಬ ಆರೋಗ್ಯ ಕೈಪಿಡಿಯನ್ನು ಬರೆದು ಪ್ರಕಟಿಸಿದ್ದಾರೆ.
ತಾವೇ ಅಧ್ಯಯನ ನಡೆಸಿ, ಸಂಶೋಧನೆ ಮಾಡಿ ತಯಾರಿಸಿದ ಆಯುರ್ವೇದ ಔಷಧಿಗಳ ಮೂಲಕ ಅವರು ಅನೇಕರಿಗೆ ಆರೋಗ್ಯಭಾಗ್ಯ ರಕ್ಷಣೆಗೆ ಕಾಯಕಲ್ಪ ನೀಡಿದ್ದಾರೆ.ಆರೋಗ್ಯ ಪ್ರಸಾದಿನೀ ಕೃತಿ ಉಪಯುಕ್ತ ಮಾಹಿತಿ, ಮಾರ್ಗದರ್ಶನದೊಂದಿಗೆ ಆರೋಗ್ಯ ರಕ್ಷಣೆ ಬಗ್ಯೆ ಮಾಹಿತಿಯ ಕಣಜವಾಗಿ ಮೂಡಿ ಬಂದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಅ.29ರಂದು ಧರ್ಮಸ್ಥಳದಲ್ಲಿ ಡಾ.ರಾಘವೇಂದ್ರಪ್ರಸಾದ್ ಬಂಗಾರಡ್ಕ ಬರೆದು ಪ್ರಕಟಿಸಿದ “ಆರೋಗ್ಯ ಪ್ರಸಾದಿನೀ” ಕೃತಿಯನ್ನು ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.
ಅವರ ವೈದ್ಯಕೀಯ ಸೇವೆ ಮತ್ತು ಜ್ಞಾನದಾಸೋಹ ಕಾಯಕವನ್ನು ಹೆಗ್ಗಡೆಯವರು ಶ್ಲಾಘಿಸಿ ಅಭಿನಂದಿಸಿದರು.
ಶ್ರುತಿ, ಎಂ.ಎಸ್. ಪ್ರದೀಪ್ ಕೃಷ್ಣ ಬಂಗಾರಡ್ಕ, ಜೀವವಿಮಾ ಸಲಹೆಗಾರ ಎಂ.ಎಸ್. ಭಟ್ ಉಪಸ್ಥಿತರಿದ್ದರು.
ಡಾ.ರಾಘವೇಂದ್ರ ಪ್ರಸಾದ್ ಮತ್ತು ಶ್ರುತಿ ದಂಪತಿಯ ಪುತ್ರಿಯರಾದ ಸುದೇಕ್ಷಾ ಮತ್ತು ಸುನಿಧಿ ಪ್ರಾರ್ಥನೆಯನ್ನು ಹಾಡಿದರು.