


ಅರಸಿನಮಕ್ಕಿ: ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜನ್ಮ ದಿನಾಚರಣೆ ಪ್ರಯುಕ್ತ ಗುರುಪೂಜೆ ಕಾರ್ಯಕ್ರಮ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿಧ್ಯಾರ್ಥಿಗಳಿಗೆ ಸನ್ಮಾನ ಅಕ್ಟೋಬರ್ 29 ರಂದು ಶ್ರೀ ಗುರು ನಾರಾಯಣ ಸೇವಾ ಸಂಘ ಅರಸಿನಮಕ್ಕಿಯಲ್ಲಿ ನಡೆಯಿತು.

ಸನ್ಮಾನಗೊಂಡ ವಿಧ್ಯಾರ್ಥಿಗಳ ವಿವರ ಎಸ್.ಎಸ್.ಎಲ್.ಸಿ ವಿಭಾಗದಲ್ಲಿ ಪ್ರತೀಕ್ಷಾ, ಪ್ರವಿನ್ಯ, ವಿರಾಜ್ ಜೆ, ಪಿಯುಸಿ ವಿಭಾಗದಲ್ಲಿ ನಿಶಾ, ಪ್ರಜ್ಞಾ ರವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷರಾದ ವಿಶ್ವನಾಥ ಪೂಜಾರಿ ಮೂಕಾಂಬಿಕಗಿರಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಗುರುನಾರಾಯಣ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಜಯವಿಕ್ರಮ, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೇಶ್ ಹೆಚ್ ಕೋಟ್ಯಾನ್, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಅಶ್ವತ್ ಕುಮಾರ್, ಸತೀಶ್ ಪೂಜಾರಿ ಬೂಡುದಮಕ್ಕಿ, ಸುಂದರ ಪೂಜಾರಿ ಬೂಡುಮುಗೆರು, ಜಗದೀಶ್, ಸದಾಶಿವನ್ ಬಿ ಕೆ, ಗುರುದೇವಾನ್ ಬಿ.ಕೆ, ಲಲಿತಾ ಎಲ್ಯಣ್ಣ ಪೂಜಾರಿ, ಚಿನ್ನಯ ಪೂಜಾರಿ ಶಿಬಾಜೆ, ವಿಜಯನ್ ಬಂಗೇರಡ್ಕ, ಈರಪ್ಪ ಪೂಜಾರಿ ದೇನೋಡಿ, ಎಸ್ ರವಿ ಬೆಂಗಳೂರು, ಮಾಲತಿ ಕೊಪ್ಪತಗುಡ್ಡೆ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸ್ವಾಗತವನ್ನು ಲಿಖಿತ್ ಸುವರ್ಣ, ಪ್ರಾರ್ಥನೆಯನ್ನು ಪೂಜಾಶ್ರಿ, ಪ್ರವೀನ್ಯ, ಧನ್ಯವಾದವನ್ನು ಪ್ರವೀಣ್ ಪೂಜಾರಿ, ನಿರೂಪಣೆಯನ್ನು ವಿನುತ್ ಪೆರ್ಲ ನೆರವೇರಿಸಿದರು.