ಕಳಿಯ: ದೋಣಿ ಪಲಿಕೆ ನಿವಾಸಿ ಸತೀಶ್ ಗೌಡ ನಾಪತ್ತೆ

0

ಬೆಳ್ತಂಗಡಿ: ಕಳಿಯ ಗ್ರಾಮದ ಗೇರುಕಟ್ಟೆಯ ದೋಣಿ ಪಲಿಕೆ ನಿವಾಸಿ ಸತೀಶ್ ಗೌಡ (47ವ) ಎಂಬುವರು ಕಾಣೆಯಾಗಿದ್ದಾರೆ.ಸತೀಶ್ ಗೌಡ ಅವರು ಅ.23 ರಂದು ಬೆಳಿಗ್ಗೆ 06.30 ಗಂಟೆಗೆ ಸಂಘದ ಹಣ ಕಟ್ಟಿ ಘಟ್ಟಕ್ಕೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿದ್ದು ಮನೆಯಿಂದ ಹೋದವರು ವಾಪಸು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ದೂರವಾಣಿ ಸಂಪರ್ಕಕ್ಕೂ ಸಿಗದೇ ಕಾಣೆಯಾಗಿರುತ್ತಾರೆ.ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಪೊಲೀಸ್‌ ಠಾಣಾ ಅಕ್ರ 104/2023 ಕಲಂ ಮನುಷ್ಯ ಕಾಣೆಯಂತೆ ದಾಖಲಿಸಿಕೊಂಡಿದ್ದಾರೆ.

ಕಾಣೆಯಾದ ಸತೀಶ್‌ ಗೌಡ ರವರ ಚಹರೆ: ಸುಮಾರು 47 ವರ್ಷ ಪ್ರಾಯಸ್ಥರಾಗಿದ್ದು, ಎಣ್ಣೆ ಕಪ್ಪು ಮೈ ಬಣ್ಣ, 5 ಅಡಿ ಎತ್ತರವಾಗಿದ್ದು, ಕಪ್ಪು ಬಣ್ಣದ ದಪ್ಪ ಮೀಸೆ ಇದ್ದು, ಕೂದಲು ದಪ್ಪವಾಗಿದ್ದು ಹಿಂದಕ್ಕೆ ಬಾಚುವುದಾಗಿದೆ, ಮನೆಯಿಂದ ಹೋಗುವಾಗ ನೀಲಿ ಬಣ್ಣದ ಶರ್ಟ್‌ ಮತ್ತು ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿಸುತ್ತಾರೆ, ಕಪ್ಪು ಬಣ್ಣದ ಬ್ಯಾಗ್‌ ನಲ್ಲಿ ಬಟ್ಟೆಗಳನ್ನು ಕೊಂಡು ಹೋಗಿರುತ್ತಾರೆ.ಸದ್ರಿ ಚಹರೆಯುಳ್ಳ ಸತೀಶ್‌ ಗೌಡ ರವರು ಪತ್ತೆಯಾದಲ್ಲಿ ಬೆಳ್ತಂಗಡಿ ಪೊಲೀಸ್‌ ಠಾಣಾ ದೂರವಾಣಿ ನಂಬ್ರ 08256232083/ ಪೊಲೀಸ್‌ ಉಪನೀರಿಕ್ಷಕರ ದೂರವಾಣಿ ಸಂಖ್ಯೆ 9480805370 ತಿಳಿಸಬಹುದು.

LEAVE A REPLY

Please enter your comment!
Please enter your name here