


ಮಡಂತ್ಯಾರು: ಮಂಗಳೂರು ಕ.ಸಭಾ ಮಂಗಳೂರು(ದ.ಕ ಜಿಲ್ಲೆ) ಕಥೊಲಿಕ್ ಸಭಾ ಉಡುಪಿ ಇವರು ಜಂಟಿಯಾಗಿ ಫಾ.ಮಾಥ್ಯು ವಾಸ್ ಮೆಮೋರಿಯಲ್ ಇoಟರ್ ಪ್ಯಾರಿಷ್ ಟೂರ್ನಮೆಂಟ್ ಕಮ್ಯುನಿಟಿ ಎಂಪವರ್ಮೆಂಟ್ ಟ್ರಸ್ಟ್(ರಿ)ಮಂಗಳೂರು ಇವರೊಂದಿಗೆ ಜಂಟಿಯಾಗಿ ಕ್ರಿಶ್ಚಿಯನ್ ಸ್ಪೋರ್ಟ್ಸ್ ಕ್ಲಬ್ ಮಂಗಳೂರು.ಕ.ಸಭಾ ಮಂಗಳೂರು(ದ.ಕ ಜಿಲ್ಲೆ) ಕಥೊಲಿಕ್ ಸಭಾ ಉಡುಪಿ ಇವರು ಜಂಟಿಯಾಗಿ ಅ.22ರಂದು ಮಂಗಳೂರು ಸಂತ ಅಲೋಶಿಯಸ್ ಕಾಲೇಜು ಗ್ರೌಂಡ್ ನಲ್ಲಿ ಆಯೋಜಿಸಿದ್ದ ಫುಟ್ಬಾಲ್, ತ್ರೋಬಾಲ್ ಟೂರ್ನಮೆಂಟಿನಲ್ಲಿ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ನ ಎರಡೂ ತಂಡಗಳು ಭಾಗವಹಿಸಿ, ತ್ರೋಬಾಲ್ ತಂಡ ದ್ವಿತೀಯ ಸ್ಥಾನ ಪಡೆದು, ಸಿಲ್ವರ್ ಮೆಡಲ್ ಟ್ರೋಫಿ ರೂ.15000 ನಗದು ಹಾಗೂ ಆಲ್ ರೌಂಡರ್ ಆಗಿ ಡೆಫ್ನಿಯವರು ಶೀಲ್ಡ್ ಪಡಕೊಂಡರು.
ಈ ಸಂಧರ್ಭದಲ್ಲಿ ಮಡಂತ್ಯಾರು ಚರ್ಚ್ ಗೆ ಕೀರ್ತಿ ತಂದ ತಂಡದ ಸರ್ವಸದಸ್ಯರಿಗೂ, ಆಯೋಜಕರಿಗೂ, ಸಹಕರಿಸಿದ ಕ್ರೀಡಾ ಅಭಿಮಾನಿಗಳಿಗೂ ಕಥೊಲಿಕ್ ಸಭಾ ಮಡಂತ್ಯಾರು ಘಟಕದ ಅಧ್ಯಕ್ಷರು ಫಿಲಿಪ್ ಡಿಕುನ್ಹಾ, ವಲಯ ಅಧ್ಯಕ್ಷರು ಲಿಯೋ ರೊಡ್ರಿಗಸ್, ಚರ್ಚ್ ಧರ್ಮಗುರು ವ.ಫಾ.ಸ್ಟೇನಿ ಗೋವಿಯಸ್, ಸಹಾಯಕ ಧರ್ಮಗುರುಗಳು ವ.ವಿಲಿಯಂ ಡಿ’ಸೋಜ, ಪಾಲನಾ ಮಂಡಳಿಯ ಉಪಾಧ್ಯಕ್ಷರು, ಕಾರ್ಯದರ್ಶಿ, ಸಂಚಾಲಕರು, ಹಾಗೂ ಸರ್ವ ಸದಸ್ಯರು ಅಭಿನಂದಿಸಿ ಶುಭಾಶಯಗಳನ್ನು ಕೋರಿದರು.