ಗುರುವಾಯನಕೆರೆ: ಟಿಪ್ಪರ್ ಗೆ ಟಿಟಿ ವಾಹನ ಡಿಕ್ಕಿ- ಟಿಪ್ಪರ್ ಜಖಂ

0

ಬೆಳ್ತಂಗಡಿ: ಜೈನ್ ಪೇಟೆ ಬಳಿ ಬೆಳ್ತಂಗಡಿ ಕಡೆಗೆ ಹಿತಾಚಿಯನ್ನು ಹೊತ್ತು ಸಾಗುತ್ತಿದ್ದ ಟಿಪ್ಪರ್ ಹಾಗೂ ಗುರುವಾಯನಕೆರೆ ಕಡೆಗೆ ತೆರಳುತ್ತಿದ್ದ ಟಿಟಿ ವಾಹನ ಮುಖಾಮುಖಿ ಡಿಕ್ಕಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಡಿಕ್ಕಿಯಾದ ಪರಿಣಾಮ ಟಿಪ್ಪರ್ ನ ಮುಂಭಾಗ ಸಂಪೂರ್ಣ ಜಖಂ ಆಗಿದೆ.ಟಿಟಿ ವಾಹನದಲ್ಲಿ ಇದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.ಪರಿಣಾಮ ಮದ್ದಡ್ಕದಿಂದ ಬೆಳ್ತಂಗಡಿವರೆಗೆ ಟ್ರಾಫಿಕ್ ಜಾಮ್ ಆಗಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.ಬೆಳ್ತಂಗಡಿ ಸಂಚಾರ ಠಾಣೆ ಪೊಲೀಸರು ಟ್ರಾಫಿಕ್ ಜಾಮ್ ಬಗೆಹರಿಸಲು ಹರಸಾಹಸ ಪಡುತ್ತಿದ್ದಾರೆ.ಸವಾರರಿಗೆ ಸಂಚಾರ ಸುಗಮ ಮಾಡಿಕೊಟ್ಟರು.

LEAVE A REPLY

Please enter your comment!
Please enter your name here