ಉಜಿರೆ: ನವರಾತ್ರಿ ಹಬ್ಬದ ಆರನೇ ದಿನವಾದ ಅ.20ರಂದು ಎಸ್.ಡಿ.ಎಂ. ಕಾಲೇಜಿನ ಗ್ರಂಥಾಲಯದಲ್ಲಿ ಸರಸ್ವತಿ ಪೂಜೆ ನಡೆಯಿತು. ಶ್ರಾವಣ ಮಾಸದ ಪುಣ್ಯ ಪರ್ವ ಕಾಲದಲ್ಲಿ ವರ್ಷಂಪ್ರತಿಯಂತೆ ಅರ್ಚಕ ಚಂದ್ರಶೇಖರ್ ಬಿ. ಅವರು ಪೂಜೆ ನೆರವೇರಿಸಿದರು.
ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವರ್ಗದವರು ಶ್ಲೋಕ, ಭಕ್ತಿಗೀತೆಗಳ ಮೂಲಕ ಜ್ಞಾನ, ಕಲಿಕೆ, ಬುದ್ಧಿವಂತಿಕೆ ಮತ್ತು ಸಂಗೀತದ ದೇವತೆಯಾದ ಶಾರದಾ ದೇವಿಯನ್ನು ಸ್ತುತಿಸಿದರು. ಗ್ರಂಥಾಲಯದ ಮುಂಭಾಗದಲ್ಲಿ ಬಾಳೆ ಗಿಡಗಳನ್ನು ಕಟ್ಟಿ ಒಳಾಂಗಣ, ಹೊರಾಂಗಣಗಳನ್ನು ತಳಿರುತೋರಣಗಳಿಂದ ಅಲಂಕರಿಸಲಾಗಿತ್ತು.ಕಾಲೇಜು ಹಬ್ಬದ ವಾತಾವರಣದಿಂದ ತುಂಬಿತ್ತು.
ಪೂಜೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗ್ಡೆ, ಉಪ ಪ್ರಾಂಶುಪಾಲ ಪ್ರೊ. ಶಶಿಶೇಖರ ಎನ್. ಕಾಕತ್ಕರ್, ಆಡಳಿತ ಕುಲಸಚಿವೆ ಡಾ. ಶಲೀಪ್ ಎ.ಪಿ., ಪರೀಕ್ಷಾಂಗ ಕುಲಸಚಿವೆ ಪ್ರೊ. ನಂದಾಕುಮಾರಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಗ್ರಂಥಪಾಲಕ ಯೋಗೇಶ್ ಎಚ್.ಇ. ಮತ್ತು ಸಿಬ್ಬಂದಿ, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಸಾದ ವಿತರಣೆ ನಡೆಯಿತು.