ಹಿರಿಯ ಸಾಹಿತಿ ಡಾ.ಪ್ರಭಾಕರ ಶಿಶಿಲರ ಕೊಡಗಿನ ಲಿಂಗರಾಜ ಕಾದಂಬರಿ ಲೋಕಾರ್ಪಣೆ

0

ಶಿಶಿಲ: ಹಿರಿಯ ಸಾಹಿತಿ ಡಾ. ಪ್ರಭಾಕರ ಶಿಶಿಲರ 10ನೆಯ ಕಾದಂಬರಿ ಕೊಡಗಿನ ಲಿಂಗರಾಜ ಅ.29ರಂದು ಪೂರ್ವಾಹ್ನ 10ಕ್ಕೆ ಅಖಿಲ ಭಾರತ ವೀರ ಶೈವ ಲಿಂಗಾಯತ ಮಹಾಸಭಾ (ರಿ.) ಬೆಂಗಳೂರು ಇದರ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಕೊಡಗಿನ ಹಾಲೇರಿ ವಂಶದ ಇತಿಹಾಸಕ್ಕೆ ಸಂಬಂದಿಸಿದಂತೆ ಶಿಶಿಲರು ಇದುವರೆಗೆ ನದಿ ಎರಡರ ನಡುವೆ ಮತ್ತು ದೊಡ್ಡವೀರ ರಾಜೇಂದ್ರ ಎಂಬ ಕಾದಂಬರಿ ರಚಿಸಿದ್ದು, ಇದು ಮೂರನೆಯ ಕಾದಂಬರಿಯಾಗಿದೆ. ಕೊಡಗಿನ ಕೊನೆಯ ದೊರೆ ಚಿಕ್ಕವೀರ ರಾಜೇಂದ್ರನ ತಂದೆ ಲಿಂಗರಾಜನ ಬಗೆಗಿನ ಕಾದಂಬರಿ ಇದಾಗಿದ್ದು, ಬೆಂಗಳೂರಿನ ವಸಂತ ಪ್ರಕಾಶನ (7892106719)ಇದನ್ನು ಹೊರತಂದಿದೆ.

ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಅಶೋಕ ಆಲೂರು ಕೃತಿ ಬಿಡುಗಡೆ ಮಾಡಲಿರುವರು.

ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ವಿ.ಶಿವಪ್ಪ ಪುಸ್ತಕ ಬಿಡುಗಡೆ ಮಾಡಲಿರುವರು.ಕಾರ್ಯಕ್ರಮದಲ್ಲಿ ಹರಗುರು ಚರಮೂರ್ತಿ, ಈಶ್ವರ ಖಂಡ್ರೆ, ಚಂದ್ರಮೌಳಿ, ಪೊನ್ನಣ್ಣ, ಮಂತರ್ ಗೌಡ, ಶಂಕರ ಬಿದಿರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.

ಕಾರ್ಯಕ್ರಮದಲ್ಲಿ ಶಿಶಿಲರು ಅಮರ ಸುಳ್ಯದ ರೈತ ಬಂಡಾಯದ ಬಗ್ಗೆ ಮಾತಾಡಲಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದರು.

p>

LEAVE A REPLY

Please enter your comment!
Please enter your name here