ಗುರುವಾಯನಕೆರೆ: ಶ್ರೀ ಭ್ರಾಮರಿ ಕುಣಿತ ಭಜನಾ ತಂಡದ ಎರಡನೇ ವರ್ಷದ ಕಾರ್ಯಕ್ರಮ ಭಕ್ತಿಹೆಜ್ಜೆ

0

ಗುರುವಾಯನಕೆರೆ: ಶ್ರೀ ಭ್ರಾಮರಿ ಕುಣಿತ ಭಜನಾ ತಂಡ ಇದರ ಎರಡನೇ ವರ್ಷದ ಕಾರ್ಯಕ್ರಮ ಭಕ್ತಿಹೆಜ್ಜೆ ಇದನ್ನು ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿರುವ ಶ್ರೀ ರಾಜರಾಜೇಶ್ವರಿ ದೇವಿಯ ಸನ್ನಿಧಿಯಲ್ಲಿ ಅ.17ರಂದು ನಡೆಸಲಾಯಿತು.

ಕಾರ್ಯಕ್ರಮವನ್ನು ಗುರುವಾಯನಕೆರೆ ಹವ್ಯಕ ಸಭಾದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಗೋವಿಂದ ಶಾಸ್ತ್ರಿ ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗುರುವಾಯನಕೆರೆ ಹವ್ಯಕ ಸಭಾದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಕೇಶವ ಭಟ್ ಅತ್ತಾಜೆ, ಮುರಳೀಧರ ಭಟ್, ರಾಜರಾಜೇಶ್ವರಿ ಭಜನಾ ಮಂಡಳಿ ಅಧ್ಯಕ್ಷೆ ಜಯಂತಿ, ಏಕನಾಥ ಶೆಟ್ಟಿ ಹಾಗೂ ಶ್ರೀ ಬ್ರಾಮರಿ ಕುಣಿತ ಭಜನಾ ಮಂಡಳಿ ಗುರುಗಳು ಆಗಿರುವ ಸಂದೇಶ್ ಮದ್ದಡ್ಕ ಇವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಒಟ್ಟು 65 ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಹೆತ್ತವರು ಹಾಗೂ ಭಕ್ತಾದಿಗಳು ಅತೀ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಸಾಯಂಕಾಲ 6.00 ಗಂಟೆಗೆ ದೀಪ ಪ್ರಜ್ವಲನೆ ಮಾಡಿ ಆರಂಭ ಮಾಡಿದ ಈ ಕುಣಿತ ಭಜನಾ ಕಾರ್ಯಕ್ರಮ ರಾತ್ರಿ 08-30 ಕ್ಕೆ ಮಂಗಳದೊಂದಿಗೆ ಸಮಾಪನೆಗೊಂಡಿದ್ದು ನಂತರ ಶ್ರೀ ರಾಜರಾಜೇಶ್ವರಿ ದೇವಿಗೆ ಶ್ರೀ ಬ್ರಾಮರಿ ಕುಣಿತ ಭಜನಾ ಮಂಡಳಿ ವತಿಯಿಂದ ರಂಗಪೂಜೆ ಕಾರ್ಯಕ್ರಮ ನೆರವೇರಿತು.

ಆಗಮಿಸಿದ ಎಲ್ಲಾ ಭಕ್ತಾಧಿಗಳಿಗೆ ಫಲಾಹಾರ ಮತ್ತು ಅನ್ನ ಸಂತರ್ಪಣೆ ವ್ಯವಸ್ಥೆ ಏರ್ಪಡಿಸಲಾಗಿತ್ತು.ಇದೇ ಸಂದರ್ಭದಲ್ಲಿ ಶ್ರೀ ಬ್ರಾಮರಿ ಕುಣಿತ ಭಜನಾ ಮಂಡಳಿ ಗುರುಗಳು ಆಗಿರುವ ಸಂದೇಶ್ ಮದ್ದಡ್ಕ ಮತ್ತು ಅವರ ಧರ್ಮಪತ್ನಿಗೆ ವಿದ್ಯಾರ್ಥಿಗಳ ಪರವಾಗಿ ಶಾಲು ಹಾಕಿ ಫಲಪುಷ್ಪ ನೀಡಿ ಗೌರವ ಸಮರ್ಪಣೆ ಮಾಡಲಾಯಿತು.ಆಗಮಿಸಿದ ಎಲ್ಲರೂ ವಿದ್ಯಾರ್ಥಿಗಳ ಕುಣಿತ ಭಜನಾ ಸಂಕೀರ್ತನೆ ಕೇಳಿ, ನೋಡಿ ಸಂತೋಷಪಟ್ಟರು ಮತ್ತು ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.

p>

LEAVE A REPLY

Please enter your comment!
Please enter your name here