ಮಿತ್ತಬಾಗಿಲು: ಮರದ ದೊಣ್ಣೆಯಿಂದ ಹಲ್ಲೆ-ದೂರು ದಾಖಲು

0

ಬೆಳ್ತಂಗಡಿ: ಮೋಟಾರ್ ಸೈಕಲಿನಲ್ಲಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ ಆರೋಪದಡಿ ವ್ಯಕ್ತಿಯೋರ್ವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಿತ್ತಬಾಗಿಲು ನಿವಾಸಿ ಮೋಹನ (37 ವ) ಎಂಬವರು ದೂರು ನೀಡಿದ್ದು ತಾನು ಅ. 18ರಂದು ಬೆಳಿಗ್ಗೆ ಮನೆಯಿಂದ ಕೂಲಿ ಕೆಲಸಕ್ಕೆಂದು ಹೊರಟು ಹೋಗಿದ್ದವನು ಮಿತ್ತಬಾಗಿಲು ಗ್ರಾಮದ ಶಾಂತಿಗುಡ್ಡೆ ಎಂಬಲ್ಲಿ ಓಬಯ್ಯ ಪೂಜಾರಿ ಎಂಬವರೊಂದಿಗೆ ಮಾತನಾಡುತ್ತಿದ್ದಾಗ ಸದಾಶಿವ ಯಾನೆ ಮೇದಪ್ಪ ಎಂಬವರು ಮೋಟರ್ ಸೈಕಲಿನಲ್ಲಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಇದ್ದ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.

ಈ ವೇಳೆ ಓಬಯ್ಯ ಪೂಜಾರಿಯವರು ಹಲ್ಲೆಯನ್ನು ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 100/2023 ಕಲಂ 324,323,504,506 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here