


ಬೆಳ್ತಂಗಡಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘ ಇದರ ಪ್ರಥಮ ಮಹಾಸಭೆ ಅ.16ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಬಿಎಂಎಸ್ ಜಿಲ್ಲಾಧ್ಯಕ್ಷರು ಹಾಗೂ ವಕೀಲರಾದ ಅನಿಲ್ ಕುಮಾರ್ ಅವರು ವಹಿಸಿದ್ದರು.
ಮುಖ್ಯ ಅತಿಥಿ ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಮಾತನಾಡಿ ರಬ್ಬರ್ ಟ್ಯಾಪರ್ ಕಾರ್ಮಿಕ ಸಂಘಟನೆಯ ಅವಶ್ಯಕತೆ ಹಾಗೂ ಭಾರತೀಯ ಮಜ್ದೂರ್ ಸಂಘದ ಕುಟುಂಬದ ಪರಿಕಲ್ಪನೆಯ ಸಂಘದ ಚಟುಚಟಿಕೆಯ ಬಗ್ಗೆ ವಿವರಿಸಿ ಹೆಚ್ಚಿನ ರಬ್ಬರ್ ಕಾರ್ಮಿಕರನ್ನು ಸಂಘದ ಸದಸ್ಯರನ್ನಾಗಿಸಲು ಸಂಘಟನೆಯ ಪ್ರಮುಖರು ಶ್ರಮಿಸಬೇಕು ಎಂದು ಕರೆ ನೀಡಿದರು.

ಹಾಗೂ ಕೇಂದ್ರ ಸರಕಾರ ಹಾಗೂ ರಬ್ಬರ್ ಬೋರ್ಡ್ ನ ವತಿಯಿಂದ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಮಾಹಿತಿ ಕಾರ್ಮಿಕರಿಗೆ ನೀಡಿದರು.ಬಿಎಂಎಸ್ ತಾಲೂಕು ಅಧ್ಯಕ್ಷರಾದ ಉದಯ ಕುಮಾರ್ ಬಿ.ಕೆ ಅವರು ಮಾತನಾಡಿ ಶುಭ ಹಾರೈಸಿದರು.ರಾಜಾ ಮಾಚಾರು ಅವರು ಸಂಘದ ಮೂರು ವರ್ಷಗಳ ಕಾರ್ಯ ಚಟುವಟಿಕೆಯ ವರದಿಯನ್ನು ನೀಡಿದರು.ನೂತನ ಪಧಾದಿಕಾರಿಗಳ ಅಯ್ಜೆ ಪಕ್ರಿಯೆ ಕೂಡ ಈ ಸಂದರ್ಭದಲ್ಲಿ ನೇರವೇರಿತು.
ವೇದಿಕೆಯಲ್ಲಿ ರಬ್ಬರ್ ಟ್ಯಾಪರ್ ಮಜ್ದೂರ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಮಾಚಾರು, ಸುಳ್ಯ ರಬ್ಬರ್ ಟ್ಯಾಪರ್ ಮಜ್ದೂರ್ ಸಂಘದ ಅಧ್ಯಕ್ಷರಾದ ಶಶಿಕುಮಾರ್, ಪುತ್ತೂರು ರಬ್ಬರ್ ಟ್ಯಾಪರ್ ಮಜ್ದೂರ್ ಸಂಘದ ಅಧ್ಯಕ್ಷರಾದ ನಾಗರಾಜ ಪುತ್ತೂರು, ಬೆಳ್ತಂಗಡಿ ರಬ್ಬರ್ ಟ್ಯಾಪರ್ ಮಜ್ದೂರ್ ಸಂಘದ ಅಧ್ಯಕ್ಷರಾದ ಹರೀಶ್ .ಜೆಕೆ ಬಿಎಂಎಸ್ ತಾಲೂಕು ಸಂಯೋಜಕ ಸಾಂತಪ್ಪ ಕಲ್ಮಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಾಗರಾಜ ಮಾಚಾರು ಸ್ವಾಗತಿಸಿ, ಸಾಂತಪ್ಪ ಕಲ್ಮಂಜ ನಿರೂಪಿಸಿ, ನಾಗೇಶ್ ನೆರಿಯ, ರಘುಪತಿ ತೋಡಿಕಾನ ಸಹಕರಿಸಿದರು.