ಪೆರಿಂಜೆಯಲ್ಲಿ ನಡೆದ ಎನ್ ಎಸ್ ಎಸ್. ಶಿಬಿರದ ಸಮಾರೋಪ- ಶಿಬಿರದಿಂದ ಸಹಜವಾದ ಶಿಕ್ಷಣ ಸಿಗುತ್ತದೆ – ಪ್ರತಾಪಸಿಂಹ ನಾಯಕ್

0

ಪೆರಿಂಜೆ : ಶಿಕ್ಷಣವೆಂದರೆ ಪುಸ್ತಕದ ಹಾಗೂ ಮಾಹಿತಿಗಳ ಸಂಗ್ರಹವಲ್ಲ. ಶಿಕ್ಷಣದೊಂದಿಗೆ ಅನುಭವ ಹಾಗೂ ಶಕ್ತಿಗೆ ಇಂತಹ ಶಿಬಿರಗಳು ಸಹಾಯ ಮಾಡುತ್ತವೆ. ಭಾರತದ ಆತ್ಮವೇ ಅಧ್ಯಾತ್ಮ. ಇದರೊಂದಿಗೆ ಯಾವುದೇ ವ್ಯಕ್ತಿಗೆ ಭಾರತದಲ್ಲಿ ಸಹಜವಾದ ಶಿಕ್ಷಣ ಸಿಗುತ್ತದೆ.

ಎನ್ನೆಸ್ಸೆಸ್ ಇದಕ್ಕೊಂದು ಉದಾಹರಣೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು.ಇವರು ಪೆರಿಂಜೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ನಡೆದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ಅವರು ಅಧ್ಯಕ್ಷತೆ ವಹಿಸಿದ್ದರು.ಉಜಿರೆ ಎಸ್.ಡಿ.ಎಂ ಪ.ಪೂ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಸಮಾರೋಪ ಭಾಷಣ ಮಾಡಿದರು. ಎನ್ನೆಸ್ಸೆಸ್ ನಾಯಕ ಸುದರ್ಶನ್ ನಾಯಕ್ ವರದಿ ವಾಚನ ಮಾಡಿದರು. ನಾಯಕಿ ದಕ್ಷಾ ಹಾಗೂ ಸ್ವಯಂ ಸೇವಕ ಬೊರೇಶ್ ಶಿಬಿರಾನುಭವವನ್ನು ತಿಳಿಸಿದರು.ಈ ಸಂದರ್ಭದಲ್ಲಿ ಶಿಬಿರ ಸಮಿತಿಯ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು ಹಾಗೂ ಸಹಾಯಕರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಶಿಬಿರ ಸಮಿತಿಯ ಅಧ್ಯಕ್ಷ ವಿಕಾಸ್ ಜೈನ್ , ಕಾರ್ಯದರ್ಶಿ ವಿದ್ಯಾನಂದ ಜೈನ್ , ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಬಿ.ಸೋಮಶೇಖರ ಶೆಟ್ಟಿ , ಪೆರಿಂಜೆ ಗುತ್ತಿನ ಜಯರಾಜ ಕಂಬಳಿ , ದ.ಕ ಕೃ. ಅ. ಸಹಕಾರಿ ಸಂಘದ ನಿರ್ದೇಶಕ ಎನ್. ಸೀತಾರಾಮ ರೈ , ಉದ್ಯಮಿಗಳಾದ ಕೆ. ಭಾಸ್ಕರ ಪೈ ಹಾಗೂ ವಿಶ್ವಾಸ್ ಜೈನ್ , ಮುಖ್ಯೋಪಾಧ್ಯಾಯ ಮುಕುಂದಚಂದ್ರ ಉಪಸ್ಥಿತರಿದ್ದು ವಿದ್ಯಾರ್ಥಿ ಸ್ವಯಂ ಸೇವಕರಿಗೆ ಬಹುಮಾನಗಳನ್ನು ವಿತರಿಸಿ ಶುಭ ಹಾರೈಸಿದರು.

ಎನ್ನೆಸ್ಸೆಸ್ ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಸ್ವಾಗತಿಸಿದರು.ಪಲ್ಲವಿ ಬಹುಮಾನ ಪಟ್ಟಿ ವಾಚಿಸಿದರು. ಸಾಕ್ಷಿ ನಿರೂಪಿಸಿ , ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ವಂದಿಸಿದರು.

LEAVE A REPLY

Please enter your comment!
Please enter your name here