ಗೇರುಕಟ್ಟೆ: ಶುದ್ಧ ಹಾಲು ಉತ್ಪಾದನೆ ಮತ್ತು ಹೈನುಗಾರಿಕಾ ಮಾಹಿತಿ ಶಿಬಿರ

0

ಗೇರುಕಟ್ಟೆ : ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಶುದ್ಧ ಹಾಲು ಉತ್ಪಾದನೆ ಮತ್ತು ಹೈನುಗಾರಿಕಾ ಮಾಹಿತಿ ಶಿಬಿರ ಕಾರ್ಯಕ್ರಮ ಸಂಘದ “ಕ್ಷೀರ ಸಂಗಮ” ಸಭಾ ಭವನದಲ್ಲಿ ಅ.15 ರಂದು ನಡೆಯಿತು.

ದ‌.ಕ.ಹಾಲು ಒಕ್ಕೂಟದ ಶೇಖರಣೆ ಹಾಗೂ ತಾಂತ್ರಿಕ ವಿಭಾಗದ ವ್ಯವಸ್ಥಾಪಕ ರಾದ ಡಾ.ರಾಮಕೃಷ್ಣ ಭಟ್ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಒಕ್ಕೂಟದ ವತಿಯಿಂದ ಸಂಘದ ಸದಸ್ಯರಿಗೆ ಸಿಗುವ ಸವಲತ್ತು ಮತ್ತು ಸಹಾಯಧನವನ್ನು ಸಂಪೂರ್ಣ ಬಳಕೆ ಮಾಡಿಕೊಂಡು ಹೈನುಗಾರಿಕೆಯಲ್ಲಿ ಕೃಷಿಕರು ಹೆಚ್ಚಿನ ಲಾಭ ಪಡೆಯುವ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು.

ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಜನಾರ್ಧನ ಗೌಡ ಕೆ ಸ್ವಾಗತಿಸಿ,ಸಭೆಯ ಅಧ್ಯಕ್ಷತೆ ವಹಿಸಿದ್ದರು.
ದ.ಕ.ಮಂಗಳೂರು ಹಾಲು ಒಕ್ಕೂಟದ ನಿವೃತ್ತ ಪ್ರಧಾನ ವ್ಯವಸ್ಥಾಪಕ ಡಾ.ನಿತ್ಯಾನಂದ ಭಕ್ತ ಶುದ್ಧ ಹಾಲು ಉತ್ಪಾದನೆ ಮತ್ತು ಹೈನುಗಾರಿಕಾ ಮಾಹಿತಿಯನ್ನು ನೀಡಿದರು.ಹಾಗೂ ಈ ಸಂದರ್ಭದಲ್ಲಿ ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ವತಿಯಿಂದ ಅವರನ್ನು ಸನ್ಮಾನಿಸಿ, ಗೌರವಿಸಿದರು.

ಸಂಪನ್ಮೂಲ ವ್ಯಕ್ತಿಯಾಗಳಾಗಿ ದ.ಕ.ಸ. ಮಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ ,ದ.ಕ.ಒಕ್ಕೂಟ ಪುತ್ತೂರು ವಲಯ ಉಪವ್ಯಸ್ಥಾಪಕರಾದ ಡಾ.ಸತೀಶ್ ರಾವ್,ದ.ಕ.ಸ.ಹಾಲು ಒಕ್ಕೂಟದ ಬೆಳ್ತಂಗಡಿ ವಲಯದ ವಿಸ್ತರಣಾ ಅಧಿಕಾರಿ ರಾಜೇಶ್ ಪಿ.ಕಾಮಾತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಳಿಯ ಗ್ರಾಮ ಪಂಚಾಯತ್ ನಿಕಟ ಪೂರ್ವ ಉಪಾಧ್ಯಕ್ಷೆ ಕುಸುಮ ಎನ್.ಬಂಗೇರ, ಪಿಲಿಗೂಡು ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯ ನಿರ್ವಹಣಾಧಿಕಾರಿ ಭಾರತಿ, ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಸಿರಿಲ್ ಪಿಂಟೋ, ನಿರ್ದೇಶಕರಾದ ಕುಶಲಾವತಿ, ಪ್ರವೀಣ ಪೂಜಾರಿ, ಗಿರಿಯಪ್ಪ ಗೌಡ ಕೆ, ರಂಜನ್ ಹೆಚ್, ನೆವಿಲ್ ಸ್ಟೀವನ್ ಮೋರಾಸ್, ವಸಂತ ನಾಯ್ಕ, ಯೋಗಿನಿ, ಗಂಗಯ್ಯ ಗೌಡ, ಮೋಹನದಾಸ್ ಶೆಟ್ಟಿ, ರೇಖಾ, ಸಿಬ್ಬಂದಿಗಳಾದ ರಕ್ಷಿತ್,ವಿಜಯ ಕುಮಾರ್ ಕೆ, ತಾರನಾಥ ಉಮೇಶ್ ಗೌಡ ಉಪಸ್ಥಿತರಿದ್ದು ಸಹಕರಿಸಿದರು.

ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಮಾಹಿತಿ ಶಿಬಿರ ಕಾರ್ಯಕ್ರಮದ ಪ್ರಯೋಜನಗಳನ್ನು ಪಡೆದು ಕೊಂಡರು.
ಸತೀಶ್ ಭಂಡಾರಿ ಗೇರುಕಟ್ಟೆ ಪ್ರಾರ್ಥನೆ ಮಾಡಿದರು.ರಾಘವ ಹೆಚ್.ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಗುಲಾಬಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here