ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

0

ಮಡಂತ್ಯಾರು: ಪುಂಜಾಲಕಟ್ಟೆ ಮತ್ತು ಗುರುವಾಯನಕೆರೆ ವಲಯದ ಪ್ರಾಥಮಿಕ ವಿಭಾಗದ ಕ್ರೀಡಾಕೂಟವು ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಸೇಕ್ರೆಡ್ ಹಾರ್ಟ್ ಕ್ರೀಡಾಂಗಣದಲ್ಲಿ ನೆರವೇರಿತು.

ಈ ಕ್ರೀಡಾಕೂಟದಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ 7ನೇ ತರಗತಿಯ ಮಹಮ್ಮದ್ ಶಿಬ್ಲಿ , ಶೇಕ್ ಮಹಮ್ಮದ್ ಅಮನ್ , ರೋಯಲ್ ಮೊರಾಸ್, ಆಲ್ಸ್ಟರ್ ಡಿಸೋಜ ಮತ್ತು 8ನೇ ತರಗತಿಯ ಅನ್ವಿತ್ ಎಸ್, ಆರನ್ ಸ್ಮಿತ್, ಫ್ಲಾಯಿಡ್ ಮಿಸ್ಕಿತ್, ಮಹಮ್ಮದ್ ಶಯಾಫ್, ವಿಸ್ಮಿತಾ ಪ್ರಭು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೂ  7ನೇ ತರಗತಿಯ ಅಲಿಶಾ ಡೇಸ, ಲಾಸ್ಯ, ಮತ್ತು 8ನೇ ತರಗತಿಯ ಅಂಶು ಪಿ ಜೈನ್, ಅನುಷ್ ರವರು ದ್ವಿತೀಯ ಸ್ಥಾನ ಪಡೆದಿರುತ್ತಾರೆ. 7ನೇ ತರಗತಿಯ ವೃಂದ ನಾಯಕ್ ರವರು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಹಾಗೂ ಪ್ರೌಢಶಾಲಾ ವಿಭಾಗದ ಪುಂಜಾಲಕಟ್ಟೆ ಮತ್ತು ಗುರುವಾಯನಕೆರೆ ವಲಯದ ಕ್ರೀಡಾಕೂಟವು ಸರಕಾರಿ ಪ್ರೌಢಶಾಲೆ ಗೇರುಕಟ್ಟೆಯಲ್ಲಿ ನೆರವೇರಿತು.

ಈ ಕ್ರೀಡಾಕೂಟದಲ್ಲಿ 9ನೇ ತರಗತಿಯ ಲಿಸ್ಟನ್ ಕಾರ್ಲ್ ರವರು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಕ ವಲೇರಿಯನ್ ಡಿಸೋಜ ಮತ್ತು ಮಂಜುನಾಥರವರು ತರಬೇತಿಯನ್ನು ನೀಡಿರುತ್ತಾರೆ.

LEAVE A REPLY

Please enter your comment!
Please enter your name here