ಕೊಕ್ಕಡ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕನ್ಯಾಡಿ ಶಾಲೆಗೆ ಹಲವು ಪ್ರಶಸ್ತಿ

0

ಧರ್ಮಸ್ಥಳ: ನಿಡ್ಲೆಯಲ್ಲಿ ನಡೆದ ಕೊಕ್ಕಡ ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ II ಇಲ್ಲಿನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ 26 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.

ಪ್ರಶಸ್ತಿ ಗಳಿಸಿದ ಕ್ರೀಡೆಗಳ ವಿವರ: ಪ್ರೌಢಶಾಲಾ ವಿಭಾಗ ಎಂಟನೇ ತರಗತಿ : ಹುಡುಗರ ವಿಭಾಗ 600 ಮೀಟರ್ ಪ್ರಥಮ ಮತ್ತು ದ್ವಿತೀಯ ಸ್ಥಾನ ,600 ಮೀಟರ್ ಹುಡುಗಿಯರ ವಿಭಾಗ ಪ್ರಥಮ, ಹುಡುಗರ ವಿಭಾಗ 400 ಮೀಟರ್ ಓಟ ಪ್ರಥಮ ,ಗುಂಡು ಎಸೆತ ಪ್ರಥಮ, ಚಕ್ರ ಎಸೆತ ಪ್ರಥಮ ,ಹುಡುಗರ ವಿಭಾಗದಲ್ಲಿ 100 ಮೀಟರ್ ಓಟ ಪ್ರಥಮ, 200 ಮೀಟರ್ ಓಟ ಹುಡುಗರ ವಿಭಾಗದಲ್ಲಿ ಪ್ರಥಮ ,ಹುಡುಗರ ರಿಲೇ ಪ್ರಥಮ, ಹುಡುಗಿಯರ ವಿಭಾಗದ ಹೈಜಂಪ್ ದ್ವಿತೀಯ ,ಹುಡುಗಿಯರ ರಿಲೇ ಪ್ರಥಮ ಸ್ಥಾನ ಗಳಿಸಿದ್ದಾರೆ.ಪ್ರಾಥಮಿಕ ವಿಭಾಗ ಏಳನೇ ತರಗತಿ : ಹುಡುಗರ ರಿಲೇ ತೃತೀಯ, ಹುಡುಗರ ಗುಂಡು ಎಸೆತ ತೃತೀಯ, ಹುಡುಗಿಯರ ಚಕ್ರ ಎಸೆತ ತೃತೀಯ, ಹುಡುಗಿಯರ 600 ಮೀಟರ್ ತೃತೀಯ ಸ್ಥಾನವನ್ನು ಗಳಿಸಿದ್ದಾರೆ. ಎಂಟನೇ ತರಗತಿಯ ಶ್ರೀಧರ ಬಸಪ್ಪ ಗುಂಡಿ ವೈಯಕ್ತಿಕ ಚಾಂಪಿಯನ್ ಪಟ್ಟ ವನ್ನು ಗಳಿಸಿದ್ದಾರೆ.

LEAVE A REPLY

Please enter your comment!
Please enter your name here