ಬಂದಾರು: ನಮ್ಮ ಮಣ್ಣು ನಮ್ಮ ದೇಶ ಅನ್ನುವ ಧ್ಯೇಯದೊಂದಿಗೆ ಬಂದಾರು ಹಾಗೂ ಮೊಗ್ರು ಗ್ರಾಮದ ದೇವಸ್ಥಾನ-ದೈವಸ್ಥಾನ ದಿಂದ ಸಂಗ್ರಹ ಮಾಡಿದ ಒಂದು ಹಿಡಿ ಮಣ್ಣನ್ನು ಒಟ್ಟು ಸೇರಿಸಿ ಬಂದಾರು ಗ್ರಾಮದ ಪೇಲತ್ತಿಮಾರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ನಂತರ ಬೆಳ್ತಂಗಡಿ ಮಂಡಲಕ್ಕೆ ಕಳುಹಿಸಿಕೊಡಲಾಯಿತು.
ಆ ಮಣ್ಣು ದೆಹಲಿಯಲ್ಲಿ ನಿರ್ಮಾಣವಾಗುವ ಯೋಧರ ಸ್ಮಾರಕಕ್ಕೆ ನಿರ್ಮಾಣಕ್ಕೆ ಉಪಯೋಗಿಸಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಮಂಡಲ ಬಿಜೆಪಿ ಉಪಾಧ್ಯಕ್ಷರಾದ ಸೀತಾರಾಮ ಬೆಳಾಲು, ಕಣಿಯೂರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಗೌಡ ಮುಗೆರಡ್ಕ, ಬಂದಾರು ಶಕ್ತಿ ಕೇಂದ್ರ ಪ್ರಮಖರಾದ ಅಶೋಕ್ ಗೌಡ ಪಾಂಜಾಲ, ಮೈರೊಳ್ತಡ್ಕ ಬೂತ್ ಅಧ್ಯಕ್ಷರಾದ ಪ್ರಶಾಂತ್ ಗೌಡ ನಿರುಂಬುಡ, ಬಂದಾರು ಬೂತ್ ಅಧ್ಯಕ್ಷರಾದ ಚೇತನ್ ಗೌಡ, ಮೊಗ್ರು ಬೂತ್ ಅಧ್ಯಕ್ಷರಾದ ಶಿವ ಗೌಡ ಹೆವ, ಕಾರ್ಯದರ್ಶಿ ಸಚಿನ್, ಬಂದಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪುಷ್ಪಾವತಿ, ಮಾಜಿ ಅಧ್ಯಕ್ಷರಾದ ಪರಮೇಶ್ವರಿ ಕೆ ಗೌಡ, ಮಾಜಿ ಉಪಾಧ್ಯಕ್ಷರಾದ ಗಂಗಾಧರ ಮುಗೆರಡ್ಕ, ಸದಸ್ಯರಾದ ಅನಿತಾ, ಸುಚಿತ್ರಾ, ಭಾರತಿ, ಪ್ರಮುಖರಾದ ಜಗದೀಶ್ ಕೂಂಬೇಡಿ, ರಕ್ಷಿತ್ ಪೆಲತ್ತಿಮಾರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.