ನಡ: ಸ.ಪ್ರೌ ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

0

ನಡ: ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ, ವಕೀಲರ ಸಂಘ (ರಿ) ಬೆಳ್ತಂಗಡಿ ಹಾಗೂ ಸರಕಾರಿ ಪ್ರೌಢಶಾಲೆ ನಡ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ಸೆ.27ರಂದು ಸರಕಾರಿ ಪ್ರೌಢಶಾಲೆ ನಡ ಇಲ್ಲಿ ನೆರವೇರಿಸಲಾಯಿತು.

ಕಾರ್ಯಕ್ರಮವನ್ನು ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿಜಯೇಂದ್ರ ಟಿ ಹೆಚ್ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಸರಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಕಲಿತು ಸಾಧನೆಗೈದವರನ್ನು ನೆನಪಿಸಿದ ನ್ಯಾಯಾಧೀಶರು, ನಡ ಪ್ರೌಢಶಾಲೆಯ ಸಾಧನೆಯನ್ನು ಮುಕ್ತ ಕಂಠದಿಂದ ಪ್ರಸಂಶಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ.ಎಸ್. ಇವರು ಮಾತನಾಡಿ “ಹಕ್ಕುಗಳನ್ನು ಕೇಳುವಾಗ, ಕರ್ತವ್ಯದ ಅರಿವು ಕೂಡಾ ಇರುವುದು ಮುಖ್ಯ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ವಕೀಲರಾದ ಆರ್ ಶುಭಾಷಿಣಿ ಭಾಗವಹಿಸಿ ಪೋಕ್ಸೋ ಕಾಯಿದೆಯ ಬಗ್ಗೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿಯನ್ನು ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕರಾದ ಯಾಕೂಬ್ ಎಸ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಕೀಲರಾದ ಮುಮ್ತಾಜ್ ಬೇಗಂ, ಸಪ್ನಾ ಹೋಟೇಲ್ ಮಾಲಕರಾದ ಚಿತ್ರೇಷ್ ಶೆಟ್ಟಿ, ಅರೆಕಾಲಿಕ ಕಾನೂನು ಸೇವಾ ಕಾರ್ಯಕರ್ತರಾದ ರಾಘವೇಂದ್ರ ಶೆಟ್ಟಿ ಹಾಗೂ ಶಾಲಾ ಶಿಕ್ಷಕರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶಿವಪುತ್ರ ಸುಣಗಾರ ಸ್ವಾಗತಗೈದರು.ಶಿಕ್ಷಕರಾದ ಮೋಹನ್ ಬಾಬು ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಮಾನ್ಯ ನ್ಯಾಯಾಧೀಶರು ಗಣಿತ ಪ್ರಯೋಗಶಾಲೆಯನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು.

p>

LEAVE A REPLY

Please enter your comment!
Please enter your name here