ತಾಲೂಕು ಮಟ್ಟದ ಪದವಿಪೂರ್ವ ಕಾಲೇಜಿನ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ-ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಉಜಿರೆ: ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜಿನ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟವು ಸೇ.26ರಂದು ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಉಜಿರೆ ಎಸ್ ಡಿ ಎಂ ಕಾಲೇಜಿನ ವಿಧ್ಯಾರ್ಥಿಗಳು ಪ್ರಥಮ ಸ್ಥಾನವನ್ನೂ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಬೆಸ್ಟ್ ಆಲ್ ರೌಂಡರ್ ಅನ್ನು ರಂಜಿನಿ ದ್ವಿತೀಯ ಪಿಯುಸಿ, ಬೆಸ್ಟ್ ಕ್ಯಾಚರ್ ಮಾನ್ಯಶ್ರೀ ದ್ವಿತೀಯ ಪಿಯುಸಿ ಪಡೆದುಕೊಂಡಿದ್ದಾರೆ.

ಬಾಲಕರ ವಿಭಾಗದಲ್ಲಿ ಬೆಸ್ಟ್ ಆಲ್ ಲ್ರೌಂಡರ್ ಸುಶೀಲ್, ಬೆಸ್ಟ್ ರೈಡರ್ ದೇವರಾಜ್ ವಯಕ್ತಿಕ ಬಹುಮಾನವನ್ನು ಪಡೆದಿರುತ್ತಾರೆ.

ಇವರಿಗೆ ಕೃಷ್ಣನಂದ, ರಮೇಶ್ ಹೆಚ್, ಸಂದೇಶ್ ಪೂಂಜ ತರಬೇತಿಯನ್ನು ನೀಡಿರುತ್ತಾರೆ.

LEAVE A REPLY

Please enter your comment!
Please enter your name here