ಅ.1 ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ವತಿಯಿಂದ 11ಅಸಕ್ತ ಆಶ್ರಮಗಳಿಗೆ ಅಕ್ಕಿ ವಿತರಣೆ-ಡಿ.28:ಸಾಮೂಹಿಕ ವಿವಾಹ-3 ಬಡ ಕುಟುಂಬಗಳಿಗೆ ಮನೆ ಹಸ್ತಾಂತರ- ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ 11 ವರ್ಷದ ಪ್ರಯುಕ್ತ 542ನೇ ಸೇವಾ ಯೋಜನೆಯಾಗಿ ವಿವಿಧ ತಾಲೂಕಿನ 11 ಆಶಕ್ತ ಆಶ್ರಮಗಳಿಗೆ ಅಕ್ಕಿ ವಿತರಣೆ, 11 ಅಶಕ್ತ ಬಡ ರೋಗಿಗಳಿಗೆ ವಸ್ತ್ರಗಳು ವಿತರಣೆ, ಅರಣ್ಯ ಇಲಾಖೆ ಸಹಕಾರದೊಂದಿಗೆ 11 ವಿವಿಧ ಬಗೆಯ ಹಣ್ಣ ಹಂಪಲುಗಳ ಗಿಡಗಳ ವಿತರಣೆಯು ಅ.11ರಂದು ಬೆಳ್ತಂಗಡಿ ಬಸ್ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ. ಹೇಳಿದರು.ಅವರು ಸೆ.25 ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಅರುಣ್ ಕುಮಾರ್‌ ಪುತ್ತಿಲ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.ಸಂದೀಪ್ ಬೆಳ್ತಂಗಡಿ ಅಧ್ಯಕ್ಷತೆ ವಹಿಸಲಿದ್ದಾರೆ.

ಅತಿಥಿಗಳಾಗಿ ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ಧರ್ಮಗರು ವಂ.ಫಾ. ವೊಲ್ಟರ್ ಡಿ’ಮೆಲ್ಲೊ, ಬಳಂಜ ಧರ್ಮಗುರು ಜ ಝಮೀರ್ ಸಅದಿ ಆಲ್ ಫಾಝಿಲ್, ಬೆಳ್ತಂಗಡಿ ವೃತ ನಿರೀಕ್ಷಕ ನಾಗೇಶ್ ಕದ್ರಿ ಉಪವಲಯ ಅರಣ್ಯಾಧಿಕಾರಿ ಹರಿಪ್ರಸಾದ್, ಬೆಳ್ತಂಗಡಿ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ರಾಜೇಶ್ ಕೋಟ್ಯಾನ್, ಪತ್ರಕರ್ತ ಮನೋಹರ್ ಬಳಂಜ, ತಾಲೂಕು ಆಸ್ಪತ್ರೆ ಕಛೇರಿ ವ್ಯವಸ್ಥಾಪಕ ಅಜೇಯ್, ವಕೀಲ ಪ್ರಶಾಂತ್.ಎಂ. ಭಾಗವಹಿಸಲಿದ್ದಾರೆ.

ವಿಶೇಷ ಆಕರ್ಷಣೆಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ತುಳು ಚಲನಚಿತ್ರ ಮದಿನಮೆ ತಂಡ ಉತ್ತಮ ಬಾಲ ನಟ ಅಮನ್ ಎಸ್. ಕರ್ಕೇರ ಭಾಗವಹಿಸಲಿದ್ದಾರೆ ಎಂದರು.

ಡಿ.28ರಂದು 12 ಜೋಡಿಗಳಿಗೆ ಸಾಮೂಹಿಕ ವಿವಾಹ, ಮತ್ತು 3 ಬಡ ಕುಟುಂಬಗಳಿಗೆ ಮನೆ ಹಸ್ತಾಂತರ ಮಂಗಳೂರು ಕುದ್ರೋಳಿ ದೇವಸ್ಥಾನದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಗೌರವ ಸಲಹೆಗಾರ ಪ್ರೇಮರಾಜ್ ರೋಶನ್ ಸಿಕ್ವೆರ ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಕೇಸರಿ ಟ್ರಸ್ಟ್ ಅಧ್ಯಕ್ಷ ಸಂದೀಪ್, ಸಂಚಾಲಕ ಶಶಿಕಾಂತ್, ಕಾರ್ಯದರ್ಶಿ ಪ್ರಶಾಂತ್ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here