ಅರಸಿನಮಕ್ಕಿಯಲ್ಲಿ ಅರಸಿನಮಕ್ಕಿ ಮೆಡಿಕಲ್ ಶುಭಾರಂಭ

0

ಬೆಳ್ತಂಗಡಿ: ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯ ವಿಕಾಸ್ ಕಾಂಪ್ಲೆಕ್ಸ್ ನಲ್ಲಿ ಅರಸಿನಮಕ್ಕಿ ಮೆಡಿಕಲ್‌ ಸೆ.21ರಂದು ಶುಭಾರಂಭಗೊಂಡಿತು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಗಾಯತ್ರಿ ಉದ್ಘಾಟಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧೀರ್ ಕುಮಾರ್, ಸಂಕೀರ್ಣದ ಮಾಲಕ ಧರ್ಣಪ್ಪ ಗೌಡ, ಪ್ರಗತಿಪರ ಕೃಷಿಕರಾದ ವೇಣುಗೋಪಾಲ ಕುಳ್ಳಾಜೆ ಕಾಂಚನ ಮತ್ತು ಸುಬ್ರಹ್ಮಣ್ಯ, ಎ.ಜೆ.ಅಸ್ಪತ್ರೆಯ ದಂತ ವೈದ್ಯ ಚಂದನ್ ಅರ್.ಕೆ.ಭಾಗವಹಿಸಿದ್ದರು.ಈಶ್ವರ ನಾಯಕ್ ಮಂಜಿಪಲ್ಲ, ತಾರನಾಥ ಕಾಂಚನ, ಪ್ರೀತೇಶ್ ಮಂಗಳೂರು ಅನೀಶ್, ಕಿರಣ್ ಬಿ , ಮಹೇಶ್ ಪಿ.ಕೆ, ಕೇಶವ, ಶಶಿಕಿರಣ್ ಕಾಂಚನ, ಚರಣ್ ಕಾಂಚನ ಉಪಸ್ಥಿತರಿದ್ದರು.‌

ಮೆಡಿಕಲ್ ಮಾಲಕ ರಾಮಚಂದ್ರ ಕಾಂಚನ ಅತಿಥಿಗಳನ್ನು ಸ್ವಾಗತಿಸಿ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here