ಗೇರುಕಟ್ಟೆ: ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.22 ರಂದು ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಸಭಾ ಭವನದಲ್ಲಿ ನಡೆಯಿತು.
ಹಾಲು ಉತ್ಪಾದಕರ ಸಂಘ ಅಧ್ಯಕ್ಷ ಜನಾರ್ಧನ ಗೌಡ ಕೆ. ಸಭೆಯ ಅಧ್ಯಕ್ಷತೆ ವಹಿಸಿದ್ದರು.ಸಂಘದ ಮುಖ್ಯ ಕಾರ್ಯ ನಿರ್ವಾಣಾಧಿಕಾರಿ ಗುಲಾಬಿ ವಾರ್ಷಿಕ ಖರ್ಚು-ವೆಚ್ಚದ ವರದಿಯನ್ನು ಸಭೆಯಲ್ಲಿ ಓದಿದರು.ದ.ಕ.ಸ.ಹಾಲು ಒಕ್ಕೂಟದ ಬೆಳ್ತಂಗಡಿ ತಾಲೂಕು ವಿಸ್ತಾರಣಾಧಿಕಾರಿ ಅನುಪಾಲನ ವರದಿಯನ್ನು ಮಂಡಿಸಿದರು.
ಸಭೆಯಲ್ಲಿ ಸದಸ್ಯರ ಚರ್ಚೆಯ ಮುಖ್ಯಾಂಶ: ನೂತನ ಕಟ್ಟಡ ನಿರ್ಮಾಣಕ್ಕೆ ತಗಲುವ ಖರ್ಚು, ವೆಚ್ಚದ ಬಗ್ಗೆ ಸಂಘದ ಸದಸ್ಯರಲ್ಲಿ ಮಾತುಕತೆ ನಡೆಸದೆ ಸಂಘದ ಅಧ್ಯಕ್ಷರು, ಉಪಾಧ್ಯಾಕ್ಷರ, ನಿರ್ದೇಶಕರ ತೀರ್ಮಾನ ಅಂತಿಮವಾಗಿದೆ.ಕಟ್ಟಡದ ನಿರ್ಮಾಣದ ಮತ್ತು ವಾರ್ಷಿಕ ಸಾಮಾನ್ಯ ಸಭೆಯ ಕೈಪಿಡಿಯಲ್ಲಿ ಸೂಕ್ತವಾದ ಮಾಹಿತಿ ನೀಡದಿರುವ ಬಗ್ಗೆ ಸಭೆಯಲ್ಲಿ ಮಾಜಿ ಅಧ್ಯಕ್ಷ ಹರಿದಾಸ ಪಡಂತ್ತಾಯ, ಜಯನಾರಾಯಣ ಉಪಾಧ್ಯಾಯ, ಸದಸ್ಯರಾದ ನವೀನ್ ಶೆಟ್ಟಿ, ಪೆಲಿಕ್ಸ ಕೊರೆಯಾ, ಉರ್ಬನ್ ಮೊರಸ್, ರಾಘವ ಹೆಚ್ ಅಸಮಾಧಾನ ವ್ಯಕ್ತಪಡಿಸಿದರು.ಪಶು ಆಹಾರದಲ್ಲಿ ಕಳಪೆ ಗುಣಮಟ್ಟವನ್ನು ಸರಿಪಡಿಸುವಂತೆ ಬಾಲಕೃಷ್ಣ ಗೌಡ ಬಿರ್ಮೊಟ್ಟು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಜನಾರ್ಧನ ಗೌಡ ಕೆ ಮಾತನಾಡಿ ಸಂಘದ ಕಛೇರಿಯಲ್ಲಿ ಸೂಕ್ತವಾದ ಮಾಹಿತಿ ಹಾಗೂ ದಾಖಲೆಗಳನ್ನು ಪರಿಶೀಲಿಸಲು ಲಭ್ಯವಿರುತ್ತದೆ.ಯಾವುದೇ ರೀತಿಯಲ್ಲಿ ಅವ್ಯವಹಾರ ನಡೆದಿರುವುದಿಲ್ಲ ಹಾಗೂ ಮಂಗಳೂರು ದ.ಕ.ಹಾಲು ಉತ್ಪಾದಕರ ಒಕ್ಕೂಟದ ಅದೇಶ ಮತ್ತು ಸಲಹೆ, ಸೂಚನೆಯಂತೆ ನಡೆದಿರುತ್ತದೆ ಎಂದು ಸ್ಪಷ್ಟ ಪಡಿಸಿ ಸಂಘಕ್ಕೆ ಉತ್ತಮ ಗುಣಮಟ್ಟದ ಹಾಳು ಪೂರೈಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ವಿನಂತಿಸಿದರು.
ಸಂಘದ ಸದಸ್ಯರು ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭ ಪಡೆಯಲು ಉತ್ತಮ ಗುಣಮಟ್ಟದ ಹಾಲು ಸಂಘಕ್ಕೆ ಪೂರೈಕೆ ಮಾಡಬೇಕೆಂದು ತಿಳಿಸಿದರು. ಈಗಾಗಲೇ ಗುಣಮಟ್ಟದ ಪಶು ಆಹಾರ ಒಕ್ಕೂಟದ ಮೂಲಕ ಸಂಘಗಳಿಗೆ ಪೂರೈಕೆ ಮಾಡಲಾಗುತ್ತದೆ ಎಂದು ಹೇಳಿದರು.
ಸಂಘದ ಅಂತರಿಕ ಲೆಕ್ಕ ಪರಿಶೋಧಕರಾದ ಕೆ.ಎಸ್ ಹರಿಪ್ರಸಾದ್, ಪಶು ವೈಧ್ಯಾಧಿಕಾರಿ ಡಾ.ಗಣಪತಿ, ಸಂಘದ ಉಪಾಧ್ಯಾಕ್ಷ ಸಿರಿಲ್ ಪಿಂಟೊ, ನಿರ್ದೇಶಕರಾದ ಕುಶಲಾವತಿ, ಪ್ರವೀಣ್ ಪೂಜಾರಿ, ಗಿರಿಯಪ್ಪ ಗೌಡ, ಕೇಶವ ಪೂಜಾರಿ, ರಂಜನ್ ಹೆಚ್, ನೆವಿಲ್ ಸ್ಟೀವನ್ ಮೋರಾಸ್, ವಸಂತ ನಾಯ್ಕ, ಯೋಗಿನಿ, ಗಂಗಯ್ಯ ಗೌಡ, ಮೋಹನದಾಸ ಶೆಟ್ಟಿ, ರೇಖಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಳಿಯ ಸಿ.ಎ.ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ಉಪಾಧ್ಯಕ್ಷ ನಾಣ್ಯಪ್ಪ ಪೂಜಾರಿ ಕೆ, ನಿರ್ದೇಶಕ. ಶೇಖರ ನಾಯ್ಕ.ನಾಳ ಉತ್ಪಾದಕರ ಸಂಘದ ಅಧ್ಯಕ್ಷ ಸುಧಾಕರ ಮಜಲು ಮತ್ತು ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಿವಿಧ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ, ಗೌರವ :
ಹಾಲು ಉತ್ಪಾದಕರ ಸಂಘದ ಸದಸ್ಯರ ಮಕ್ಕಳು 2022-23 ನೇ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶ್ರಾವ್ಯ ಹೆಚ್.ಆರ್, ಸುಜಿತ್ ಸುಂದರ, ಸಂಕೇತ್ ಕೆ,ಹಾಗೂ ದ್ವಿತೀಯ ಪಿ.ಯು.ಸಿ.ಪ್ರಕೃತಿ ವಿ.ಅನುಷಾ ಪಿ.ದೀಪಕ್ ಕೆ, ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದರು.
2022-23ನೇ ಸಾಲಿನಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಕೆ ಮಾಡಿದ ಪ್ರಥಮ: ಉರ್ಬನ್ ಮೋರಾಸ್, ದ್ವೀತಿಯ: ವಲೇರಿಯನ್ ಡಿ.ಸೋಜ, ತೃತೀಯ: ವೀರಪ್ಪ ಪೂಜಾರಿ ಗೌರವಿಸಿದರು.
ಡೆಂಟಲ್ ಶಿಕ್ಷಣದಲ್ಲಿ 4 ಮತ್ತು 5 ನೇ ರಾಂಕ್ ಪಡೆದ ಕುಮಾರಿ ಅನುದೀಕ್ಷಾ ಎಸ್.ಆರ್.
ನಿವೃತ್ತ ಸೈನಿಕರಾದ ದಿನೇಶ್ ಗೌಡ ಕಲಾಯಿತೊಟ್ಟು, ಸುಭ್ರಮಣಿ ಐ.ಎಮ್.ಗೇರುಕಟ್ಟೆ, ರಾಜೇಶ್ ಕಾಮತ್ ಹಾಗೂ ಪ್ರಸ್ತುತ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಬೇಬಿ ಗೌಡ ಪೇರಾಜೆ, ವಿಕ್ರಂ ವಂಜಾರೆ, ಪ್ರಮೋಧ್ ಗೌಡ ಬರಾಯ, ಸೂರಜ್ ಶೆಟ್ಟಿ ನೆಲ್ಲಿಕಟ್ಟೆ ಇವರ ಪರವಾಗಿ ಪೋಷಕರನ್ನು ವೇದಿಕೆಯಲ್ಲಿ ಸನ್ಮಾನಿಸಿ, ಗೌರವಿಸಿದರು.ಜಿಲ್ಲಾ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಗಳಿಸಿದ ನಾಗವೇಣಿ ಕೆ.ಎಸ್ ರವರನ್ನು ಸನ್ಮಾನಿಸಲಾಯಿತು.
ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ವರ ಸಂಯೋಜನೆ ಮಾಡಿ ಸತೀಶ್ ಭಂಡಾರಿ ಗೇರುಕಟ್ಟೆ ರವರನ್ನು ಗೌರವಿಸಿದರು.
ಹಾಲು ಉತ್ಪಾದಕರ ಸಂಘದ ಅಂತರಿಕ ಲೆಕ್ಕ ಪರಿಶೋಧಕರಾದ ಕೆ.ಎಸ್.ಹರಿಪ್ರಸಾದ್ ಗೇರುಕಟ್ಟೆ, ದ.ಕ.ಹಾ.ಉ.ಒಕ್ಕೂಟದ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ, ಕಟ್ಟಡ ನಿರ್ಮಾಣ ಸಮಯದಲ್ಲಿ ಕಚೇರಿಗೆ ಕಟ್ಟಡದ ಸಹಕಾರ ನೀಡಿದ ಮೋಹನ ಗೌಡ ರವರನ್ನು ಗೌರವಿಸಿದರು.
ಸಂಘದ ನಿರ್ದೇಶಕ ರಂಜನ್ ಹೆಚ್ ಸ್ವಾಗತಿಸಿದರು.ಉಮೇಶ್ ಕೇಲ್ದಡ್ಕ ಕಾರ್ಯಕ್ರಮ ನಿರೂಪಿಸಿದರು.ಸಂಘದ ನಿರ್ದೇಶಕ ನೆವಿಲ್ ಸ್ಟೀವನ್ ಮೋರಾಸ್ ಧನ್ಯವಾದವಿತ್ತರು.