ಕೊಕ್ಕಡ: ಜೇಸಿ ಸಪ್ತಾಹದ ಸಮಾರೋಪ ಸಮಾರಂಭದ ಅಂಗವಾಗಿ ಸೆಪ್ಟೆಂಬರ್ 17ರಂದು ಕೊಕ್ಕಡ ಕಪಿಲಾ ಜೇಸಿ ಸಂಸ್ಥೆಯ ವತಿಯಿಂದ ಮನೆ ಮನೆ ಭೇಟಿ ನಡೆಸಲಾಯಿತು.
ಆಯ್ದ ಗ್ರಾಮಗಳಲ್ಲಿನ ಹಿರಿಯ ನಾಗರಿಕರು, ಅಶಕ್ತರ ಸಮೀಕ್ಷೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ನಿಡ್ಲೆ ಗ್ರಾಮ ಕಲ್ಕುಡ ಗುಡ್ಡೆ ಸಂಜೀವ ಎಂ. ಕೆ ಅವರ ಪತ್ನಿಪ್ರೇಮ ಅವರ ಚಿಕಿತ್ಸೆಗೆ ನೆರವು ನೀಡಲಾಯಿತು.ವಿವಿಧ ಕಾಯಿಲೆ ಪೀಡಿತರ ಯೋಗ ಕ್ಷೇಮ ವಿಚಾರಿಸಿ ಆತ್ಮ ಸ್ಥೈರ್ಯ ತುಂಬಲಾಯಿತು. ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಹಾಗೂ ಶೀಘ್ರ ಗುಣಮುಖರಾಗುವಂತೆ ಹಾರೈಸಲಾಯಿತು.
ಜೇಸಿ ತಂಡದಲ್ಲಿ ಅಧ್ಯಕ್ಷರಾದ ಶ್ರೀ ಜಿತೇಶ್ ಎಲ್. ಪಿರೇರಾ, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಕೆ. ಶ್ರೀಧರ ರಾವ್, ಜೋಸೆಫ್ ಪಿರೇರಾ, ಜೆಸಿಂತಾ ಡಿ ಸೋಜ, ಸಂಧ್ಯಾ , ಕಮಲ ಮುಂತಾದವರು ಉಪಸ್ಥಿತರಿದ್ದರು.
p>