






ನೆರಿಯ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಸಮೂಹ ಸಂಪನ್ಮೂಲ ಕೇಂದ್ರ ಅಣಿಯೂರು ಕಕ್ಕಿಂಜೆ ಇದರ ಸಹಭಾಗಿತ್ವದಲ್ಲಿ ಬಯಲು ಶಾಲೆಯಲ್ಲಿ ನಡೆದ ಅಣಿಯೂರು ಕಕ್ಕಿಂಜೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬಯಲು ಶಾಲಾ ವಿದ್ಯಾರ್ಥಿಗಳು ಹಿರಿಯ ಮತ್ತು ಕಿರಿಯ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳಿಗೆ ಶಾಲಾಭಿವೃದ್ಧಿ ಸಮಿತಿ ಮತ್ತು ಶಾಲಾ ಶಿಕ್ಷಕರಿಂದ ಅಭಿನಂದನೆ ಕಾರ್ಯಕ್ರಮ ನಡೆಯಿತು.
ಪ್ರತಿಭಾ ಕಾರಂಜಿ ಕಿರಿಯರ ವಿಭಾಗದಲ್ಲಿ ಧಾರ್ಮಿಕ ಪಠಣ ಸಂಸ್ಕೃತದಲ್ಲಿ ತ್ರಿಷ ಪ್ರಥಮ ಸ್ಥಾನ, ಧಾರ್ಮಿಕ ಪಠಣ ಅರೇಬಿಕ್ ನಲ್ಲಿ ಮೊಹಮ್ಮದ್ ಫಾಹಿಲ್ ತೃತೀಯ ಸ್ಥಾನ, ಭಕ್ತಿಗೀತೆಯಲ್ಲಿ ಪೂರ್ವಿಕ ದ್ವಿತೀಯ ಸ್ಥಾನ, ಚಿತ್ರಕಲೆಯಲ್ಲಿ ಸಿಂಚನ ಪ್ರಥಮ ಸ್ಥಾನ.


ಕ್ಲೇ ಮಾಡೆಲಿಂಗ್ ನಲ್ಲಿ ಮನೀಷ್ ದ್ವಿತೀಯ ಸ್ಥಾನ.ಛದ್ಮವೇಷದಲ್ಲಿ ಧನ್ವಿ ತೃತೀಯ ಸ್ಥಾನ.ಪ್ರತಿಭಾ ಕಾರಂಜಿ ಹಿರಿಯರ ವಿಭಾಗದಲ್ಲಿ ಕನ್ನಡ ಕಂಠಪಾಠದಲ್ಲಿ ಶಂಶೀನ ಪ್ರಥಮ ಸ್ಥಾನ.ಇಂಗ್ಲಿಷ್ ಕಂಠಪಾಠದಲ್ಲಿ ಮಹಮ್ಮದ್ ಆಸೀಫ್ ಪ್ರಥಮ ಸ್ಥಾನ.ಧಾರ್ಮಿಕ ಪಠಣ ಸಂಸ್ಕ್ರತ ದಲ್ಲಿ ವರ್ಷಿಣಿ ಪ್ರಥಮ ಸ್ಥಾನ.ಧಾರ್ಮಿಕ ಪಠಣ ಅರೇಬಿಕ್ ನಲ್ಲಿ ಮೊಹಮ್ಮದ್ ಸಮ್ಮಸ್ ಅಲಿ ಪ್ರಥಮ ಸ್ಥಾನ.
ಅಭಿನಯ ಗೀತೆಯಲ್ಲಿ ನಿಶಿಕಾ ತೃತೀಯ ಸ್ಥಾನ.ಕ್ಲೇ ಮಾಡೆಲಿಂಗ್ ನಲ್ಲಿ ಪರಿಷ್ಣ ದ್ವಿತೀಯ ಸ್ಥಾನ.ಮಿಮಿಕ್ರಿ ಯಲ್ಲಿ ಪ್ರಣಿತ್ ಪ್ರಥಮ ಸ್ಥಾನಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಧಾನ ಪಡೆದ ಸ್ಪರ್ಧಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯದರು.









