ತೆಕ್ಕಾರು: ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

0

ತೆಕ್ಕಾರು : ತೆಕ್ಕಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ‌ವು ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್ ಅವರ ಅಧ್ಯಕ್ಷತೆಯಲ್ಲಿ ಸೆ.17 ರಂದು ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ತೆಕ್ಕಾರಿನಲ್ಲಿ ನಡೆಯಿತು. ಸಂಘವು ಸತತ ಮೂರು ವರ್ಷಗಳಿಂದ ಶೇ.100 ರಷ್ಟು ಸಾಲ ವಸೂಲಾತಿ ನಡೆಸಿ ಸಾಧನ ಶ್ರೇಷ್ಠ ಪ್ರಶಸ್ತಿಯನ್ನು ಗಳಿಸಿದೆ.

ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ 9% ಡಿವಿಡೆಂಡ್ ನೀಡಿದ್ದು, ಸಂಘವು ಪ್ರಸ್ತುತ ಸಾಲಿನಲ್ಲಿ 90 ಕೋಟಿ ರೂಪಾಯಿ ವ್ಯವಹಾರ ನಡೆಸಿ 23 ಲಕ್ಷ ರೂಪಾಯಿ ಲಾಭ ಗಳಿಸಿದೆ.ಸಂಘವು 2022 -23ನೇ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ “ಎ” ಶ್ರೇಣಿಯನ್ನು ಪಡೆದಿದೆ. ಸಂಘದ ನೂತನ ಗೋದಾಮು ಕಟ್ಟಡ ನಿರ್ಮಾಣಕ್ಕೆ ಅಂದಾಜು 52 ಸಾವಿರ ರೂಪಾಯಿ ಬೇಕಾಗುತ್ತದೆ.ಎಂ.ಎಸ್.ಸಿ.ಸ್ಕೀಮ್ ನಲ್ಲಿ ಅನುದಾನ ಮಂಜೂರಾಗಿದೆ.

ಉಳಿದ ಮೊತ್ತವನ್ನು ಕ್ಷೇಮ ನಿಧಿಯಿಂದ ಬಳಸಲಾಗುವುದು ಎಂದು ಹೇಳಿದ ಅವರು ಸಂಘವು ಉನ್ನತ ಮಟ್ಟದಲ್ಲಿ ಬೆಳೆದು ಬರಲು ಸದಸ್ಯರು ಜನತೆಯ ಸಹಕಾರ ಅಪಾರವಾಗಿದೆ.ಸಂಘದ ಅಭಿವೃದ್ಧಿಗೆ ರೈತಪಿವರ್ಗದವರು ಗ್ರಾಹಕರು ಸಹಕಾರಿಸಬೇಕು ಎಂದರು.ಸಂಘದ ಉಪಾಧ್ಯಕ್ಷ ನಾಗರಾಜ್ ಹೆಗ್ಡೆ, ನಿದೇರ್ಶಕರುಗಳಾದ ಜನಾರ್ದನ ಪೂಜಾರಿ,ಶಿವಪ್ಪ ಪೂಜಾರಿ, ಹುಸೈನ್, ಶೇಖರ ಪೂಜಾರಿ,ನೆಬಿಸ, ಸಂಗೀತಾ,ರವಿ, ಅಬ್ದುಲ್ ರಹಿಮಾನ್, ಹಾಗೂ ವೃತ್ತಿಪರ ನಿರ್ದೇಶಕರುಗಳಾದ ಅಬ್ದುಲ್ ಮುನೀರ್, ಇನಾಸ್ ರೋಡ್ರಿಗಸ್ ಮತ್ತು ದ.ಕ.ಜಿಲ್ಲಾ ಕೇಂದ್ರ ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು. ಎಸೆಸೆಲ್ಸಿ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಂಘದ ಸಿಬ್ಬಂದಿಗಳಾದ ನಮಿತಾ ಸ್ವಾಗತಿಸಿದರು, ಶಾಯಿದಾ ನಿರೂಪಿಸಿದರು.ಸಂಘದ ಸಿಬ್ಬಂದಿಗಳಾದ ಪ್ರೇಮಾ, , ಉಸ್ಮಾನ್, ಅಬ್ದುಲ್ ರಝಾಕ್, ಹೈದರ್,ನಿಕ್ಷಿತ್, ಹರಿಶ್ಚಂದ್ರ,ಶಿವರಾಮ, ಲೋಕೇಶ್ ಮತ್ತು ರತ್ನ ಸಹಕಾರಿಸಿದರು.

p>

LEAVE A REPLY

Please enter your comment!
Please enter your name here