

ಕಳಿಯ: ಇಲ್ಲಿಯ ಎರುಕಡಪ್ಪು ಅಂಗನವಾಡಿಯಲ್ಲಿ ಪೋಷನ್ ಮಾಸಾಚರಣೆ ಅಂಗವಾಗಿ ಪೌಷ್ಟಿಕಾಹಾರ ಸಪ್ತಾಹ ಕಾರ್ಯಕ್ರಮ ಸೆ.16 ರಂದು ನಡೆಯಿತು.

ಅಪೌಷ್ಟಿಕತೆ ಬಗ್ಗೆ ಪೌಷ್ಟಿಕಾಹಾರಗಳ ಸೇವನೆಯಲ್ಲಿ ಮಕ್ಕಳ ಮನವೊಲಿಸುವಲ್ಲಿ ಪೋಷಕರ ಕೆಲಸವಾಗಬೇಕು ಎಂದು ತಿಳಿಸುತ್ತಾ ಸೊಪ್ಪು, ತರಕಾರಿಗಳನ್ನು ಸೇವಿಸುವ ಮೂಲಕ ಆರೋಗ್ಯದ ಜೀವನ ನಡೆಸಲು ಸಾಧ್ಯ ಎಂದು ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಸಿಸ್ಟರ್ ಮಾಹಿತಿ ನೀಡಿದರು.
ಕಳಿಯ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕೆ ಹಾಗೂ ಆಶಾ ಕಾರ್ಯಕರ್ತೆ ಸುಭಾಷಿಣಿ ಜನಾರ್ಧನ ಗೌಡ ಕೆ,ಪಂಚಾಯತ್ ಸದಸ್ಯೆ ಶ್ವೇತಾ ಶ್ರೀನಿವಾಸ್, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ನೀತಾ ಸತೀಶ್,ಮಾಜಿ ಅಧ್ಯಕ್ಷೆ ಭಾರತಿ ಬೇಬಿ ಗೌಡ ಪಿ. ಮಕ್ಕಳ ಪೋಷಕರು, ಗರ್ಭಿಣಿ ಹಾಗೂ ಬಾಣಂತಿಯರು ಭಾಗವಹಿಸಿದರು.ಮಕ್ಕಳ ಪೋಷಕರು ಮನೆಯವರು, ಸಮಿತಿಯ ಸದಸ್ಯರು ತಯಾರಿಸಿದ ವಿವಿಧ ಬಗ್ಗೆ ಆಹಾರ, ಪದಾರ್ಥಗಳನ್ನು ಸಾರ್ವಜನಿಕರಿಗೆ ಹಂಚಲಾಯಿತು.

ಅಂಗನವಾಡಿ ಸಹಾಯಕಿ ಗೀತಾ ಸಹಕರಿಸಿದರು.ಕಾರ್ಯಕರ್ತೆ ಗುಣವತಿ ಕೆ.ಎನ್.ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಆಶಾ ಕಾರ್ಯಕರ್ತೆ ಗ್ರಾ.ಪಂ.ಸದಸ್ಯೆ ಸುಭಾಷಿಣಿ ಜನಾರ್ಧನ ಗೌಡ ಧನ್ಯವಾದವಿತ್ತರು.