ನಿಡ್ಲೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ- 10% ಡಿವಿಡೆಂಟ್ ಘೋಷಣೆ

0

ನಿಡ್ಲೆ : ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.16ರಂದು ಸಂಘದ ಸಭಾಂಗಣದಲ್ಲಿ ಜರುಗಿತು.

10% ಡಿವಿಡೆಂಟ್ ಘೋಷಣೆ: ಸಂಘದ ಅಧ್ಯಕ್ಷ ರಮೇಶ್ ರಾವ್ ಕೆ ಅಧ್ಯಕ್ಷತೆ ವಹಿಸಿ, ವಾರ್ಷಿಕ ವರದಿ ಮಂಡಿಸಿ ಮಾತನಾಡಿದ ಅವರು ಸಂಘದ ಸದಸ್ಯರ ಮತ್ತು ಸಿಬ್ಬಂದಿಗಳ ಪರಿಶ್ರಮದಿಂದ ಸಂಘವು ಉತ್ತಮ ಸ್ಥಿತಿಯಲ್ಲಿದೆ.

ಡಿ ಸಿ ಸಿ ಬ್ಯಾಂಕ್ ನಿಂದ ಸಂಘದ ಸಾಧನೆಗೆ ಅತ್ಯುತ್ತಮ ಸಾಧನೆ ಮಾಡಿದ ಪ್ರಶಸ್ತಿ ನೀಡಿ ಗೌರವಿಸಿದೆ.ಇವತ್ತು ಸಂಘದ ಸ್ವಂತ ನೂತನ ಕಟ್ಟಡದ ಮುಂದೆಯೇ ಸಭೆ ನಡೆಸುವಂತಾಗಿದೆ ಇದಕ್ಕೆ ಸಹಕರಿಸಿದ ಸಂಘದ ಎಲ್ಲಾ ಸದಸ್ಯರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ ಸುಬೇದಾರ್ ಮಹಾಬಲ.ಕೆ ಮುದ್ದಿಗೆ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಸನ್ಮಾನದ ನಂತರ ಮಾತನಾಡಿದ ಮಹಾಬಲ ಕೆ ರವರು ದೇಶದ ನಾನಾ ರಾಜ್ಯದಲ್ಲಿ ವಿಭಿನ್ನ ಸಂದರ್ಭದಲ್ಲಿ ದೇಶ ಸೇವೆ ಸಲ್ಲಿಸಿದ್ದೇನೆ ಇದನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಅತೀವ ಸಂತೋಷ ಉಂಟು ಮಾಡಿದೆ ಇಸ್ರೇಲ್ ಮಾದರಿಯಲ್ಲಿ ದೇಶದ ಪ್ರತಿ ಮನೆಯ ಮಕ್ಕಳು ದೇಶ ಸೇವೆಯಲ್ಲಿ ಪಾಲ್ಗೊಳ್ಳುವಂತಾಗಲಿ ನಮ್ಮ ಭಾಗದ ಜನರು ಹೆಚ್ಚು ಹೆಚ್ಚು ಸೈನ್ಯದಲ್ಲಿ ಸೇವೆ ಸಲ್ಲಿಸುವಂತಾಗಲಿ ಎಂದು ಹೇಳಿದರು.

ತದನಂತರ ನಡೆದ ಪ್ರಶ್ನೋತ್ತರ ವೇಳೆಯಲ್ಲಿ
1.ಮರಣ ನಿಧಿ ಸ್ಥಾಪನೆಗೆ ಮನವಿ
2.ದಿನಗೂಲಿ ನೌಕರರ ಖಾಯಂ ಬಗ್ಗೆ
3.0% ಸಾಲಕ್ಕೆ ಒಬ್ಬರು ಮಾತ್ರ ಜಾಮೀನು ಹಾಕುವ ಬಗ್ಗೆ
4.ಕೃಷಿ ಸಾಲಕ್ಕೆ ವಿಮೆ ಸೌಲಭ್ಯ ಕಲ್ಪಿಸುವ ಬಗ್ಗೆ.
5.ಚಿನ್ನ ಅಡಮಾನ ಸಾಲಕ್ಕೆ ಸರಾಪ ನೇಮಕ ಮಾಡುವ ಬಗ್ಗೆ.
6.ಸಂಘಕ್ಕೆ ಕಾಯರ್ತಡ್ಕ ದಲ್ಲಿ ಹೊಸ ಜಾಗ ಖರೀದಿ ಮಾಡುವ ಬಗ್ಗೆ.
7.ದನದ ಮೇಲಿನ ಸಾಲವನ್ನು ಹೆಚ್ಚಿಸುವ ಕುರಿತು.
8.ಪರ್ಸನಲ್ ಸಾಲವನ್ನು ಅನುಕೂಲಕ್ಕೆ ತಕ್ಕಂತೆ ತಿಂಗಳಿಗೆ ಒಮ್ಮೆ ಅಥವಾ ವರ್ಷಕ್ಕೆ ಒಮ್ಮೆ ಕಟ್ಟುವ ಬಗ್ಗೆ
9.ಸಂಘದ ವ್ಯವಹಾರವನ್ನು ಹೆಚ್ಚಿಸಿ ಇನ್ನೂ ಹೆಚ್ಚಿನ ಲಾಭ ಮಾಡಿ ಸಂಘವನ್ನು ಸುಭದ್ರ ದಿಕ್ಕಿನೆಡೆಗೆ ನಡೆಸುವ ಕುರಿತು ಸಮಗ್ರವಾದ ಚರ್ಚೆಯನ್ನು ಸಂಘದ ಸದಸ್ಯರುಗಳಾದ ಶ್ರೀಧರ ರಾವ್, ಧನಂಜಯ ಗೌಡ.ಬಾಲಕೃಷ್ಣ ದೇವಾಡಿಗ, ವಿಜಯ ಕುಮಾರ್ ಇನ್ನೂ ಹಲವಾರು ಸದಸ್ಯರುಗಳು ಆಡಳಿತ ಮಂಡಳಿ ಜೊತೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧನೆ ಪತ್ರವನ್ನು ವೇಣುಗೋಪಾಲ್ ರವರು ಮಂಡಿಸಿದರು.ವೇದಿಕೆಯಲ್ಲಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪಿ ಪದ್ಮನಾಭ, ಉಪಾಧ್ಯಕ್ಷ ರುಕ್ಕಯ್ಯ ಪೂಜಾರಿ, ನಿರ್ದೇಶಕರುಗಳಾದ ಅಶೋಕ್ ಭಟ್, ಸಬಾಸ್ಟಿನ್ ಪಿ.ಟಿ, ಡೀಕಯ್ಯ ಎಂ. ಕೆ, ನಿತ್ಯಾನಂದ ರೈ ಟಿ.ಎಸ್, ನಾರಾಯಣ ಕೆ, ಶ್ರೀಮತಿ ವಿಜಯಲಕ್ಷ್ಮೀ, ಶ್ರೀಮತಿ ಐಶ್ವರ್ಯ ಶೆಟ್ಟಿ ಜೆ, ಕೆಂಪಯ್ಯ ಗೌಡ ಎನ್, ರಾಜು, ಪದ್ಮನಾಭ ಕೆ, ಸಿರಾಜುದ್ದೀನ್ ಉಪಸ್ಥಿತರಿದ್ದರು.ಪ್ರಾರ್ಥನೆಯನ್ನು ಗಾಯತ್ರಿ ರವರು, ಸ್ವಾಗತವನ್ನು ಸಬಾಸ್ಟಿನ್ ಪಿ.ಟಿ ರವರು ಧನ್ಯವಾದವನ್ನು ಶ್ರೀಮತಿ ವಿಜಯಲಕ್ಷ್ಮಿ ರವರು ನೆರವೇರಿಸಿದರು.

LEAVE A REPLY

Please enter your comment!
Please enter your name here