ಶಿಬರಾಜೆಯ ಪಾದೆ ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ ಸಪ್ತಾಹ

0

ಶಿಬರಾಜೆ: ಇಲ್ಲಿನ ಪಾದೆ ಅಂಗನವಾಡಿಯಲ್ಲಿ ಪೋಷನ್ ಮಾಸಾಚರಣೆ ಅಂಗವಾಗಿ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಅಪೌಷ್ಟಿಕತೆ ಬಗ್ಗೆ ಪೌಷ್ಟಿಕ ಆಹಾರಗಳ ವಿಧಗಳ ಬಗ್ಗೆ ಮತ್ತು ಅವುಗಳ ಸೇವನೆಯಲ್ಲಿ ಮಕ್ಕಳ ಮನವೊಲಿಸುವ ಪೋಷಕರ ಪಾತ್ರದ ಬಗ್ಗೆ ಸಿ ಎಚ್ ಓ ನಿಕಿತಾ ರವರು ಕಿರಿಯ ಆರೋಗ್ಯ ಸಹಾಯಕಿ ರೇಖಾ ರವರು, ಕಳೆಂಜ ಗ್ರಾಮ ಪಂಚಾಯತ್ ಸದಸ್ಯರುಗಳು ಹಾಗೂ ಶಾಲಾ ಬಾಲ ವಿಕಾಸ ಸಮಿತಿಯ ಸದಸ್ಯರು ಆದಂತಹ ಟಿ ಎಸ್ ನಿತ್ಯಾನಂದ ರೈ ರವರು ಆಶಾ ಕಾರ್ಯಕರ್ತೆ ಪುಷ್ಪರವರು ಮಾಹಿತಿಯನ್ನು ತಿಳಿಸಿಕೊಟ್ಟರು.

ಮಕ್ಕಳ ಪೋಷಕರು ಮನೆಯಲ್ಲೇ ತಯಾರಿಸಿ ತಂದಂತಹ ಪೌಷ್ಟಿಕ ಆಹಾರವನ್ನು ಎಲ್ಲರು ಸೇರಿ ಸವಿದರು.

ಅಂಗನವಾಡಿ ಕಾರ್ಯಕರ್ತೆ ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು. ಸಹಾಯಕಿ ಅನ್ಸಿಲ್ಲ ರೋಷ್ನಿ ಹಾಗೂ ಶ್ರೀ ಶಕ್ತಿ ಸಂಘದ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here