ಸೆ.17 ರಿಂದ ಸೆ.20: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ, ಬೆಳ್ತಂಗಡಿ ತಾಲೂಕು ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ಸಾಮೂಹಿಕ ಗೌರಿ ಪೂಜೆ ಮತ್ತು ಶ್ರೀ ಗಣೇಶೋತ್ಸವ

0

ಉಜಿರೆ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ, ಬೆಳ್ತಂಗಡಿ ತಾಲೂಕು ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ 26ನೇ ವರ್ಷದ ಸಾಮೂಹಿಕ ಗೌರಿ ಪೂಜೆ ಮತ್ತು ಗಣೇಶೋತ್ಸವವು ಶ್ರೀ ಬ್ರಹ್ಮಶ್ರೀ ಶಿರೋಮಣಿ ಶ್ರೀ ಕೆ.ನಿತ್ಯಾನಂದನವರ ಮಾರ್ಗದರ್ಶನದಲ್ಲಿ ಸೆ.17 ರಿಂದ ಸೆ.20 ರವರೆಗೆ ಉಜಿರೆ ಶ್ರೀ ಕ್ಷೇತ್ರ ಕುಂಜರ್ಪ ವಠಾರ ತಿಮರೋಡಿ ಕು.ಸೌಜನ್ಯ ವೇದಿಕೆಯಲ್ಲಿ ನಡೆಯಲಿದೆ.

ಸೆ.20ರಂದು ಬೆಳಗ್ಗೆ 10.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ: ಸಭಾಧ್ಯಕ್ಷರಾಗಿ ಮಹೇಶ್ ಶೆಟ್ಟಿ ತಿಮರೋಡಿ ಬೀಡು ಗೌರವಾಧ್ಯಕ್ಷರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಮುಖ್ಯ ಅತಿಥಿಗಳಾಗಿ ಮೋಹಿತ್ ಕುಮಾರ್ ಹೈಕೋರ್ಟ್ ವಕೀಲರು ಬೆಂಗಳೂರು, ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಹಾಗೂ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ್ ಕಾಶಿಬೆಟ್ಟು ಇವರ ಉಪಸ್ಥಿತಿಯಲ್ಲಿ ನಡೆಯಲಿದೆ.

ಧಾರ್ಮಿಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನ ಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here