ಕಳೆಂಜ ಗ್ರಾಮ ಅರಣ್ಯ ಸಮಿತಿ ಇದರ ವಾರ್ಷಿಕ ಮಹಾಮಂಡಳಿ ಸಭೆ

0

ಕಾಯರ್ತಡ್ಕ: ಉಮಾ ಮಹೇಶ್ವರ ದೇವಸ್ಥಾನದ ಶಿವ ಪಾರ್ವತಿ ಸಭಾಭವನದಲ್ಲಿ ರಾಷ್ಟ್ರೀಯ ಅರಣ್ಯೀಕರಣ ಯೋಜನೆ, ಅರಣ್ಯ ಅಭಿವೃದ್ಧಿ ಸಮಿತಿ ಮಂಗಳೂರು ವಿಭಾಗ, ಪುತ್ತೂರು ಉಪ ವಿಭಾಗ ಉಪ್ಪಿನಂಗಡಿ ವಲಯ ಕಳೆಂಜ ಗ್ರಾಮ ಅರಣ್ಯ ಸಮಿತಿ ವಾರ್ಷಿಕ ಮಹಾಸಭೆಯು ಸೆ12ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀ ಮಂಜುನಾಥ ಹಾರಿತ್ತಕಜೆ ದೀಪ ಬೆಳಗುವ ಮೂಲಕ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಅರಣ್ಯ ಸಮಿತಿ ಕಳೆಂಜ ಇದರ ಅಧ್ಯಕ್ಷರಾದ ಶ್ರೀ ಧನಂಜಯ ಗೌಡ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಜಯಪ್ರಕಾಶ್ ಕೆ ಕೆ ವಲಯ ಅರಣ್ಯ ಅಧಿಕಾರಿಗಳು ಉಪ್ಪಿನಂಗಡಿವಾಲಯ ಹೊನ್ನಮ್ಮ ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ಕಳೆಂಜ ಬಾಲಣ್ಣಗೌಡ ಕೈಕೋಡಿ ಉಮಾಮಹೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರು ಹಾಗೂ ಪೃಥ್ವಿರಾಜ್ ಪಿ ಶೆಟ್ಟಿ ಗ್ರಾಮ ಕರಣಿಕರು ಕಳೆಂಜ ಗ್ರಾಮ ಮತ್ತು ಸಮಿತಿಯ ಕಾರ್ಯದರ್ಶಿಯಾದ ಶ್ರೀ ಪ್ರಶಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಳೆಂಜ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾದ ಧನಂಜಯರವರು ದೇಶ ಕಾಯಲು ಯೋಧರು ಎಷ್ಟು ಮುಖ್ಯವೋ ಅರಣ್ಯ ಕಾಪಾಡಲು ಅರಣ್ಯವನ್ನು ಬೆಂಕಿಯಿಂದ ಮರಕಳ್ಳರಿಂದ ಕಾಪಾಡಲು ಅರಣ್ಯ ಪಾಲಕರು ಅಷ್ಟೇ ಮುಖ್ಯವಾಗುತ್ತಾರೆ ಎಂದು ನನಗೆ ಈ ವರ್ಷ ಹಬ್ಬಿದ ಕಾಡ್ಗಿಚ್ಚಿನಿಂದ ಅರಿವಾಗಿದೆ ಈ ವರ್ಷ ಅತಿಯಾದ ಕಾಡ್ಗಿಚ್ಚು ಇದ್ದುದರಿಂದ ರಾತ್ರಿ ಹಗಲಿನ್ನದೆ ಕಿ.ಮೀ ಗಟ್ಟಲೆ ನಡೆದು ಸರಿಯಾದ ವ್ಯವಸ್ಥೆ ಗಳಿಲ್ಲದೆ ತುಂಬಾ ಕಷ್ಟದಿಂದ ಊರವರ ಜೊತೆಗೂಡಿ ಬೆಂಕಿಯನ್ನು ನಂದಿಸಿ ಕಾಪಾಡಿದ ಶ್ರೇಯ ಅರಣ್ಯ ಇಲಾಖೆಗೆ ಮತ್ತು ಸಾರ್ವಜನಿಕರಿಗೆ ಸಲ್ಲುತ್ತದೆ ಎಂದು ಹೇಳಿದರು ದೊಡ್ಡ ದೊಡ್ಡ ದೇವಸ್ಥಾನಕ್ಕೆ ಹೋಗಿ ಪೂಜಿಸಿದರೆ ಏನು ಫಲ ಇಂತಹ ಕಷ್ಟದ ಸಂದರ್ಭದಲ್ಲಿ ಪ್ರಕೃತಿ ಮಾತೆಯ ಸೇವೆ ಮಾಡಿದರೆ ಅದೇ ನಮಗೆ ಶ್ರೀರಕ್ಷೆ ಎಂದು ನುಡಿದರು.

ಈ ವಾರ್ಷಿಕ ಮಹಾಸಭೆಯಲ್ಲಿ ಬೆಂಕಿ ವೀಕ್ಷಕರಿಗೆ ಅರಣ್ಯ ಸಮಿತಿ ವತಿಯಿಂದ ಟೀ ಶರ್ಟ್ ಮತ್ತು ಬ್ಯಾಗನ್ನು ವಿತರಿಸಿದರು.2022 ಮತ್ತು 23ನೇ ಸಾಲಿನಲ್ಲಿ ಕಾಡ್ಗಿಚ್ಚು ನಿಯಂತ್ರಣಕ್ಕೆ ಸಹಕರಿಸಿದ ಕಳೆಂಜ ಪುದುವೆಟ್ಟು ವಿಭಾಗದ ಶ್ರೀಧರ ಎಂ ಕೆ, ಸುಧೀಂದ್ರ ಜೈನ್, ವೃಷಭ ಜೈನ್ ಹಾಗೂ ಹತ್ಯಡ್ಕ ಗ್ರಾಮ ವಿಭಾಗದ ರಾಜು ಕೆ ಸಾಲ್ಯಾನ್, ಶೀನಪ್ಪ ಗೌಡ ಉಡ್ಯೇರೆ, ಅವಿನಾಶ್ ಭಿಡೆ ಅವರನ್ನು ಅರಣ್ಯ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಪ್ರಶ್ನೋತ್ತರದ ವೇಳೆ ಮಿಯಾರು ಮೀಸಲು ಅರಣ್ಯದ ಪಾದೆ ಸಮೀಪ ಚೆಕ್ ಡ್ಯಾಮ್ ಮಾಡಲು ಪ್ರಸ್ತಾವನೆಯನ್ನು ಗ್ರಾಮಸ್ಥರು ಸಲ್ಲಿಸಿದರು.

ಹಾಗೆಯೇ ಪ್ರತಿ 8000 ಹೆಕ್ಟೇರ್ ಗೆ ಒಬ್ಬರು ಫಾರೆಸ್ಟ್ ಮತ್ತು ನಾಲ್ಕು ಜನ ಗಾರ್ಡ್ ಮಾತ್ರ ಇರುವುದು ಇದು ಕಾಡ್ಗಿಚ್ಚು ಆದ ಸಂದರ್ಭ ಅಥವಾ ಇನ್ನೂ ಯಾವುದೇ ತುರ್ತಿನ ಸಂಧರ್ಭದಲ್ಲಿ ಕನಿಷ್ಠ ಸೌಲಭ್ಯದೊಂದಿಗೆ ನಿರ್ವಹಣೆ ಮಾಡಲು ಕಷ್ಟ ಅಸಾಧ್ಯ ಇದನ್ನು ಮನಗಂಡು ಇನ್ನೂ ಹೆಚ್ಚಿನ ಅಧಿಕಾರಿಗಳನ್ನು ಈ ಭಾಗಕ್ಕೆ ನೇಮಕ ಮಾಡುವಂತೆ ಸರಕಾರಕ್ಕೆ ಮನವಿ ಮಾಡಲು ಅರಣ್ಯ ಇಲಾಖೆಯವರ ಬಳಿ ಪ್ರಸ್ತಾಪಿಸಿದರು.
ವಾರ್ಷಿಕ ವರದಿಯನ್ನು ಕಳೆಂಜ ಗ್ರಾಮ ಅರಣ್ಯ ಸಮಿತಿಯ ಕಾರ್ಯದರ್ಶಿಯಾದ ಶ್ರೀ ಪ್ರಶಾಂತ್ ರವರು ಮಂಡಿಸಿದರು.

ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಪ್ರಕಾಶ್ ಹಾಗೂ ಸ್ವಾಗತವನ್ನು ನಿತ್ಯಾನಂದ ರೈ ಮತ್ತು ಧನ್ಯವಾದವನ್ನು ಪ್ರಸನ್ನ ಎಪಿ ಮಾಣಿಗೇರಿ ನೆರವೇರಿಸಿದರು.

LEAVE A REPLY

Please enter your comment!
Please enter your name here