ಮಡಂತ್ಯಾರು : ಮಡಂತ್ಯಾರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ವಠಾರದಲ್ಲಿ ಸೆ.12ರಂದು ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ ಅದ್ಯಕ್ಷತೆಯಲ್ಲಿ ನಡೆಯಿತು.ಉಪಾಧ್ಯಕ್ಷ ಅಶೋಕ್ ಕೆ.ಎಸ್, ದ.ಕ.ಹಾಲು ಒಕ್ಕೂಟ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಸಂಘದ ಬಗ್ಗೆ ಮಾಹಿತಿ ಸಲಹೆ ಸೂಚನೆಗಳನ್ನು ನೀಡಿದರು.
ಪಶು ವೈದ್ಯಾಧಿಕಾರಿ ಡಾ.ಪೂಜಾ ಪಶುಗಳ ಪೋಷಣೆ, ಹಾಲಿನ ಇಳುವರಿ ಯಾವ ರೀತಿಯಲ್ಲಿ ಹೆಚ್ಚಿಸುವ ಬಗ್ಗೆ, ಕರು ರಕ್ಷಣೆ, ಪಶು ಆಹಾರ ಯಾವ ರೀತಿಯಲ್ಲಿ ಉಪಯೋಗಿಸುವ ಬಗ್ಗೆ, ಪಶುಗಳಿಗೆ ಔಷದಿ ಬಳಸುವ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ನಿರ್ದೇಶಕರುಗಳಾದ ಎಂ.ಮಂಜಯ್ಯ ಶೆಟ್ಟಿ, ರಾಮಕೃಷ್ಣ ಹೆಬ್ಬಾರ್, ಸದಾಶಿವ ಶೆಟ್ಟಿ, ವೆಂಕಪ್ಪ ಪೂಜಾರಿ, ಕೇಶವ ಮೂಲ್ಯ, ಸುನೀಂದ್ರ ಪೂಜಾರಿ, ಪ್ರವೀಣ್ಚಂದ್ರ ಶೆಟ್ಟಿ, ಆಗ್ನೆಸ್ ಎಮ್ ಫ್ರಾಂಕ್, ಸವಿತಾ ಯು ಬಂಗೇರ, ಗಿರಿಯಪ್ಪ ನಾಯ್ಕ, ಸವಿತಾ ಸುರೇಶ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಜಿ ಬಾಲಕೃಷ್ಣ ವರದಿ, ಲೆಕ್ಕ ಪತ್ರ ಮಂಡಿಸಿದರು.ಸಿಬ್ಬಂದಿ ಅಶೋಕ್ ಗುಂಡಿಯಲ್ಕೆ ಕಾರ್ಯಕ್ರಮ ನಿರೂಪಿಸಿದರು.
ಸಿಬ್ಬಂದಿಗಳಾದ ವಸಂತ ಪೂಜಾರಿ, ಕೇಶವತಿ ಸಹಕರಿಸಿದರು.ಸದಸ್ಯರು ಉಪಸ್ಥಿತರಿದ್ದರು.
ಸಂಘದಲ್ಲಿ ಒಟ್ಟು ರೂ.11ಲಕ್ಷ ಲಾಭ ಗಳಿಸಿ ಸದಸ್ಯರಿಗೆ 65% ಬೋನಸ್, ಡಿವಿಡೆಂಡ್ 25% ಘೋಷಿಸಲಾಯಿತು.ಸಂಘದ ಎಲ್ಲಾ ಸದಸ್ಯರಿಗೆ ಪ್ರೋತ್ಸಹಕ ಬಹುಮಾನ ವಿತರಿಸಲಾಯಿತು.ಉಪಾಧ್ಯಕ್ಷ ಅಶೋಕ್ ಕೆ. ಎಸ್ ಸ್ವಾಗತಿಸಿದರು, ನಿರ್ದೇಶಕಿ ಅಗ್ನೇಶ್ ಎಮ್ ಫ್ರಾಂಕ್ ವಂದಿಸಿದರು.