ಉಪ್ಪಾರಪಳಿಕೆ 24ನೇ ವರ್ಷದ ಮೊಸರು ಕುಡಿಕೆ ಉತ್ಸವ ಆಚರಣೆ

0

ಉಪ್ಪಾರಪಳಿಕೆ: ಶ್ರೀ ಕೃಷ್ಟ ಭಜನಾಮಂದಿರ ಉಪ್ಪಾರಪಳಿಕೆ ಕ್ರೀಡಾಂಗಣದಲ್ಲಿ 24ನೇ ವರ್ಷದ ಅಷ್ಟಮಿ ಆಚರಣೆ ಶ್ರದ್ದಾ ಗೆಳೆಯರ ಬಳಗ ಅಷ್ಟಮಿ ಆಚರಣ ಸಮಿತಿ ಮೂಲಕ ನಡೆಯಿತು.

ಉದ್ಘಾಟನ ಕಾರ್ಯಕ್ರಮವು ಶ್ರದ್ದಾ ಗೆಳೆಯರ ಬಳಗ ಅಧ್ಯಕ್ಷರು ಶ್ರೀಧರ್ ದೇರಾಜ್ ಇವರ ಅದ್ಯಕ್ಷತೆಯಲ್ಲಿ ನಡೆಯಿತು.ದೀಪ ಬೆಳಗಿಸಿ ಉದ್ಘಾಟನೆ ಮಾಡಿದ ಮುಖ್ಯ ಅತಿಥಿ ಸೌತಡ್ಕ ಮಹಾಗಣಪತಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರು ಹರೀಶ್ ರಾವ್ ಮುಂಡ್ರುಪಾಡಿ ಯವರು ಮಾತನಾಡಿ ಸನಾತನ ಧರ್ಮದ ಅಷ್ಟಮಿ ಆಚರಣೆ ಹಿಂದೂ ಧರ್ಮ ಒಗ್ಗೂಡುವಿಕೆ ಮೂಲಕ ಸಮಾಜಕ್ಕೆ ಧರ್ಮ ಸಂದೇಶ ಸಾರುತ್ತದೆ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿ ಕೊಕ್ಕಡ ಗ್ರಾಮಪಂಚಾಯತ್ ಅಧ್ಯಕ್ಷರು ಬೇಬಿ, ಕೊಕ್ಕಡ ಪಂಚಾಯತ್ ಉಪಾಧ್ಯಕ್ಷರು ಪ್ರಭಾಕರ್ ಗೌಡ ಮಲ್ಲಿಗೆ ಉಪಸ್ಥಿತರಿದ್ದರು.

ಶ್ರದ್ದಾ ಗೆಳೆಯರ ಬಳಗದ ಗೌರವ ಸಲಹೆಗಾರರಾದ ಯೋಗೀಶ್ ಅಲಂಬಿಲ ಕಾರ್ಯಕ್ರಮ ನಿರೂಪಿಸಿದರು.ಕುಶಾಂತ್ ರವರು ಸ್ವಾಗತಿಸಿದರು.ಗೋಪಾಲ ಅಲಂಬಿಲ ರವರು ವಂದನಾರ್ಪನೆ ನೆರವೇರಿಸಿದರು.ಬಳಿಕ ನಡೆದ ವಿವಿಧ ಕ್ರೀಡಾಕೂಟಗಲಲ್ಲಿ ಶ್ರೀನಾಥ್ ಬಡೆಕೈಲು ನವೀನ್ ಅಲಂಬಿಲ, ಶಿವಾನಂದ್ ಸಂಕೇಶ, ದಾಮೋದರ್ ಅಜ್ಜಾವರ, ಬಾಲಕೃಷ್ಣ ಬಳಕ್ಕ, ಶ್ರೀಕಾಂತ್ ಬಡೆಕೈಲು, ಆನಂದ ಅಡೈ, ರಮೇಶ್ ಕುಡ್ಲ, ಶ್ರದ್ದಾ ಗೆಳೆಯರ ಬಳಗ ಸದಸ್ಯರು, ಗ್ರಾಮಸ್ಥರು ಸಹಕಾರ ನೀಡಿದರು.

LEAVE A REPLY

Please enter your comment!
Please enter your name here