

ಉಜಿರೆ: ಶೋರಿನ್ ರಿಯೋ ಕರಾಟೆ ಅಸೋಸಿಯೇಷನ್ ಆಶ್ರಯದಲ್ಲಿ ಮೂಡಬಿದ್ರಿಯ ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಎಂ.ಕೆ.ಅನಂತ್ರಾಾಜ್ ದೈಹಿಕ ಶಿಕ್ಷಣ ಕಾಲೇಜಿನ ಸಹಯೋಗದಲ್ಲಿ ಸೆ.9ರಂದು ಮೂಡಬಿದ್ರಿಯ ಸಮಾಜ ಮಂದಿರದಲ್ಲಿ ನಡೆದ ರಾಜ್ಯ ಮಟ್ಟದ 20ನೇ ಓಪನ್ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯ 9ರಿಂದ 10 ವಯೋಮಾನದ 22ರಿಂದ 25ಕಿಲೋ ವಿಭಾಗದಲ್ಲಿ ಉಜಿರೆಯ ಅನುಗ್ರಹ ಆಂಗ್ಲ ಮಾದ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ರಯ್ಯಾನ್ ಪ್ರಥಮ ಸ್ಥಾಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಾರೆ.ಅವರು ಸೆನ್ಸಾಯಿ ಸಿಹಾನ್ ಅಬ್ದುಲ್ ರಹಮಾನ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಮಹಮ್ಮದ್ ರಯ್ಯಾನ್ ಉಜಿರೆ ಗ್ರಾಮದ ಗಾಂಧಿನಗರ ನಿವಾಸಿ ಬಿ.ಎಚ್.ಇಬ್ರಾಹಿಂ ಮತ್ತು ನೂರ್ ಜಹಾನ್ ದಂಪತಿ ಪುತ್ರ.