ಬೆಳ್ತಂಗಡಿ: ಗೋಲ್ಡನ್ ಕಂಪ್ಯೂಟರ‍್ಸ್ ಸ್ಥಳಾಂತರ

0

ಬೆಳ್ತಂಗಡಿ: ಸೆ.11ರಂದು ಯೋಗೀಶ್ ಕುಮಾರ್ ಇವರ ಮಾಲೀಕತ್ವದ ಗೋಲ್ಡನ್ ಕಂಪ್ಯೂಟರ‍್ಸ್ ಮಿನಿ ವಿಧಾನಸೌಧದ ಹತ್ತಿರ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯವಾದಿ ಭಗೀರಥ.ಜಿ ನೆರವೇರಿಸಿದರು.


ಇದೇ ಸಂದರ್ಭದಲ್ಲಿ ಗೋಲ್ಡನ್ ಬ್ಯೂಟಿಪಾರ್ಲರ್ ಉದ್ಘಾಟನೆಯನ್ನು ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ಅಧ್ಯಕ್ಷೆ, ಮಹಿಳಾ ಮಂಡಲದ ಗೌರವಾಧ್ಯಕ್ಷೆ ಶಾಂತ ಎ.ಬಂಗೇರ ನೆರವೇರಿಸಿದರು.

ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಶ್ರೀನಿವಾಸ್, ಸಂತೋಷ್ ಕುಮಾರ್, ಸುದ್ದಿ ಬಿಡುಗಡೆ ವ್ಯವಸ್ಥಾಪಕ ಮಂಜುನಾಥ ರೈ, ಸುರೇಂದ್ರ ಕೋಟ್ಯಾನ್, ಗೋಲ್ಡನ್ ಬ್ಯೂಟಿಪಾರ್ಲರ್ ನ ಮಾಲಕಿ ಜಯಾಮಾಲ, ಯೋಗೀಶ್ ರವರ ತಂದೆ ಕೊರಗಪ್ಪ ಪೂಜಾರಿ, ತಾಯಿ ರತ್ನಾವತಿ ಉಪಸ್ಥಿತರಿದ್ದರು.

ಮಾಲಕ ಯೋಗೀಶ್ ಕುಮಾರ್ ಆಗಮಿಸಿದ ಅತಿಥಿಗಳನ್ನು ಸತ್ಕರಿಸಿದರು.

LEAVE A REPLY

Please enter your comment!
Please enter your name here