ಬೆಳ್ತಂಗಡಿ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ ಸೆ.09ರಂದು ಶಾಲೆಯ ನಿಕಟ ಪೂರ್ವ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ಪ್ರಸ್ತುತ ಸರ್ಕಾರಿ ಪ್ರೌಢಶಾಲೆ ಮಚ್ಚಿನ ಇಲ್ಲಿಗೆ ವರ್ಗಾವಣೆಗೊಂಡಿರುವ ಸುರೇಶ್ ಎಂ ರವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಎಸ್.ಡಿ.ಎಂ.ಸಿ ಸರ್ವ ಸದಸ್ಯರು ಮತ್ತು ಶಾಲಾ ಪೋಷಕರ ವತಿಯಿಂದ ನಡೆಸಲಾಯಿತು.
ಕಾರ್ಯಕ್ರಮದ ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ನೀನಾಕುಮಾರ್ ಅವರು ವಹಿಸಿದ್ದರು.ಅತಿಥಿಗಳಾಗಿ ಬೆಳ್ತಂಗಡಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ನಿವೃತ್ತ ಸಮನ್ವಯಧಿಕಾರಿಗಳಾದ ಗಣೇಶ್ ಐತಾಳ್ ರವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಿಯಾಜ್ ರವರು ಆಗಮಿಸಿದ್ದರು.
ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಕಿರಣ್ ಕುಮಾರ್ ಶೆಟ್ಟಿರವರು ಹಾಗೂ ಶಾಲಾ ಮುಖ್ಯ ಶಿಕ್ಷಕ ಸೂರ್ಯನಾರಾಯಣ ಪುತ್ತೂರಾಯ ರವರು ಸನ್ಮಾನಿತರಾದ ಸುರೇಶ್ ಎಂ ರವರ ಜೊತೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿಯಾದ ವಿದ್ಯಾ ಶೆಣೈ , ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಜಿನೇಂದ್ರ ಜೈನ್, ವಿದ್ಯಾರ್ಥಿಗಳಾದ ಚೇತನ್ ಮತ್ತು ಸಂಜನಾ ಬೀಳ್ಕೊಡುತ್ತಿರುವ ಶಿಕ್ಷಕರ ಬಗ್ಗೆ ತಮ್ಮ ಅನಿಸಿಕೆಗಳನ್ನ ಹಂಚಿಕೊಂಡರು. ಅತಿಥಿಗಳೀರ್ವರು ಸುರೇಶ್ ರವರ ಬಗ್ಗೆ ಮೆಚ್ಚುಗೆಯ ಮಾತನಾಡಿ ಸರ್ಕಾರಿ ಶಾಲೆಯ ಬಗ್ಗೆ ಧನಾತ್ಮಕ ಅಂಶಗಳನ್ನು ವ್ಯಕ್ತಪಡಿಸಿದರು.
ಶಿಕ್ಷಕಿ ಸವಿತಾ ಸನ್ಮಾನ ಪತ್ರವನ್ನು ವಾಚಿಸಿದರು.ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿದಾಯ ಗೀತೆಗಳನ್ನು ಹಾಡಿದರು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಮುಖ್ಯ ಶಿಕ್ಷಕರು ಸ್ವಾಗತಿಸಿ, ಹಿರಿಯ ಶಿಕ್ಷಕರಾದ ದಿನಕರ್ ನಾಯಕ್ ವಂದನಾರ್ಪಣೆಯನ್ನ ಮಾಡಿದಂತ ಈ ಕಾರ್ಯಕ್ರಮವನ್ನು ಪೋಷಕರಾದ ಶಿವರಾಂ ರವರು ನಿರ್ವಹಿಸಿದರು.