ಕಿರಿಯಾಡಿ 33ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಉದ್ಘಾಟನೆ

0

ಉಜಿರೆ: ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ ಆಶ್ರಯದಲ್ಲಿ 33 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸೆ.10 ರಂದು ಶ್ರೀ ಸದಾಶಿವ ದೇವರಿಗೆ ವಿಶೇಷ ಪೂಜೆಯ ಬಳಿಕ ನಡೆಯಿತು.

ಲೋಕೋಪಯೋಗಿ ಇಲಾಖೆಯ ನಿವೃತ್ತ ನೌಕರರ ಡೀಕಯ್ಯ ಪೂಜಾರಿ ದೀಪ ಬೆಳಗಿಸಿ ಉದ್ಘಾತಿಸಿದರು. ರವೀಂದ್ರ ಕಾರಂತ ಕಕ್ಕರಬೆಟ್ಟ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ದೇವಸ್ಥಾನದ ಆನುವಂಶೀಕ ಆಡಳಿತ ಮೊಕ್ತೇಸರ ಭಜನಾ ಮಂಡಳಿಯ ಗೌರವ ಅಧ್ಯಕ್ಷ ಎಂ.ವಾಸುದೇವ ಸಂಪಿಗೆತ್ತಾಯ, ಉದ್ಯಮಿ ಸುಬ್ರಹ್ಮಣ್ಯ ಹೊಳ್ಳ ದಾವಣಗೆರೆ, ದೇವಸ್ಥಾನದ ಅರ್ಚಕ ಗಣೇಶ್ ಭಟ್, ಭಜನಾ ಮಂಡಳಿ ಸ್ಥಾಪಕ ಕಾರ್ಯದರ್ಶಿ ಕೊರಗಪ್ಪ ಗೌಡ, ಭಜನಾ ಮಂಡಳಿ ಅಧ್ಯಕ್ಷ ವಿಠ್ಠಲ ನಾಯ್ಕ, ಕಾರ್ಯದರ್ಶಿ ಭಗೀರಥ, ಕೋಶಾಧಿಕಾರಿ ರಮೇಶ್ ಗೌಡ, ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಊರವರು, ತೀರ್ಪುಗಾರರಾದ ಶ್ರೀ ಧ. ಮ. ನ್ಯಾಚುರೋಪತಿ ಕಾಲೇಜು ದೈಹಿಕ ನಿರ್ದೇಶಕ ಧರ್ಮೇ0ದ್ರ ಕುಮಾರ್, ರಾಜ್ಯ ಮಟ್ಟದ ಕಬ್ಬಡಿ ತೀರ್ಪುಗಾರ ಸುರೇಶ ಮುಂಡಾಜೆ ಇರರರು ಉಪಸ್ಥಿತರಿದ್ದು ಸಹಕರಿಸಿದರು.

ಭಜನಾ ಮಂಡಳಿಯ ಗೌರವ ಸಲಹೆಗಾರ ಧರ್ಣಪ್ಪ ಗೌಡ ಧರಣಿ ನಿರೂಪಿಸಿದರು.ಬಳಿಕ ವಿವಿಧ ವಾಯೋಮಾನದವರಿಗೆ ವಿವಿಧ ಸ್ಪರ್ಧೆಗಳು ಜರಗಿತು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಭಜನಾ ಮಂಡಳಿಯ ಅಧ್ಯಕ್ಷ ವಿಠ್ಠಲ ನಾಯ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ದಾವಣಗೆರೆಯ ಸುಬ್ರಹ್ಮಣ್ಯ ಹೊಳ್ಳ, ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಎಂ. ವಾಸುದೇವ ಸಂಪಿಗೆತ್ತಾಯ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಪ್ರಸಾದ್ ಓಡಲ ಇವರನ್ನು ಸನ್ಮಾನಿಸಲಾಯಿತು.ವಾರಿಸೇನ ಜೈನ್ ಮತ್ತು ಕೋಟ್ಯಪ್ಪ ಪೂಜಾರಿಯವರಿಗೆ ವೈದ್ಯಕೀಯ ನೆರವು ನೀಡಲಾಯಿತು.

p>

LEAVE A REPLY

Please enter your comment!
Please enter your name here