2023 ಜೇಸಿ ಸಪ್ತಾಹದ ಅಂಗವಾಗಿ ಆಸಕ್ತ ಮಕ್ಕಳಿಗೆ ಸೆಪ್ಟೆಂಬರ್ 10 ರಂದು ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ನಡೆಸಲಾಯಿತು.
ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಘಟಕಾಧ್ಯಕ್ಷರಾದ ಜಿತೇಶ್ ಎಲ್. ಪಿರೇರಾ ವಹಿಸಿದ್ದರು.
ಸಂತೋಷ್ ಕುಮಾರ್ ಜೈನ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಕೆ. ಶ್ರೀಧರ ರಾವ್ ಅವರು ಶುಭ ಹಾರೈಸಿದರು.ಅಕ್ಷತ್ ರೈ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.
ಸಪ್ತಾಹದ ಯೋಜನಾ ನಿರ್ದೇಶಕರಾದ ಯು. ನರಸಿಂಹ ನಾಯಕ್ ಅವರು ಸ್ಪರ್ಧೆಗಳ ಮಾಹಿತಿ ನೀಡಿದರು.ಶ್ರವಣ್ ಅವರು ಜೇಸಿ ವಾಣಿ ವಾಚಿಸಿದರು. ವಿದ್ಯಾರ್ಥಿಗಳಾದ ಧ್ಯಾನ ಮತ್ತು ಯಶ್ವಿತಾ. ತಮ್ಮ ಅನಿಸಿಕೆ ಹಂಚಿಕೊಂಡರು.ಜೆಸಿಂತಾ ಡಿ ಸೋಜ ಅವರು ತೀರ್ಪುಗಾರರಾಗಿ ಸಹಕರಿಸಿದರು.
ಜೇಸಿ ಸದಸ್ಯರುಗಳಾದ ಜೋಸೆಫ್ ಪಿರೇರಾ, ಜಸ್ವಂತ್ ಪಿರೇರಾ, ಸ್ಥಳೀಯರಾದ ರಘುಚಂದ್ರ ಪೂಜಾರಿ, ಗೀತಾ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಚಿತ್ರ ಬಿಡಿಸುವ ಪ್ರಾಥಮಿಕ ಶಾಲಾ ವಿಭಾಗದಲ್ಲಿಅನ್ವಿತ್ ಆರ್. ಪಿ. ( ಪ್ರಥಮ), ನಿಕ್ಷಿತ್ ಆರ್. (ದ್ವಿತೀಯ), ಜನನಿ( ಮೂರನೇ ) ಸ್ಥಾನ ಪಡೆದು ಬಹುಮಾನ ಗಳಿಸಿದರು.ಹಾಗೂ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕೌಶಿಕ್, ಸ್ರಜನ್ ಅವರು ಸ್ಪರ್ಧೆಗಳ ಸಮಾಧಾನಕರ ಪ್ರೋತ್ಸಾಹಕರ ಗಳಿಸಿದರು.ಪ್ರೌಢ ಶಾಲೆಯ ವಿಭಾಗದಲ್ಲಿ ಪ್ರತೀಕ್ ( ಪ್ರಥಮ)ನಿಶಾಂತ್ ( ದ್ವಿತೀಯ),ಹೇಮಾವತಿ ( ಮೂರನೇ) ಸ್ಥಾನ ಪಡೆದರು.ಪ್ರೌಢ ಶಾಲೆಯ ವಿಭಾಗದಲ್ಲಿಯಶ್ವಿತಾ, ಮೋಹಿತ್ ಕುಮಾರ್ ಅವರು ಸ್ಪರ್ಧೆಗಳಲ್ಲಿ ಪ್ರೋತ್ಸಾಹಕರ ಬಹುಮಾನ ಗಳಿಸಿದರು.
ಜೇಸಿ ಕಾರ್ಯದರ್ಶಿ ಶ್ರೀ ವಿಕ್ಟರ್ ಸುವಾರಿಸ್ ವಂದಿಸಿದರು.