ಶಿಬಾಜೆಯ ಪತ್ತಿಮಾರಿನಲ್ಲಿ ಕಾಡಾನೆ ದಾಳಿ-ಈ ಭಾಗದಲ್ಲಿ ಆನೆಯೇ ದೊಡ್ಡ ಸಮಸ್ಯೆ

0

ಶಿಬಾಜೆ: ಪತ್ತಿಮಾರಿನ ರಾಘವೇಂದ್ರ ಅಭ್ಯಂಕರ್, ಅಜಿರಡ್ಕ ಶ್ರೀಧರ್ ರಾವ್, ಮತ್ತು ಸ್ಥಳೀಯ ಕೆಲವು ತೋಟಗಳಿಗೆ ತಡರಾತ್ರಿ ಕಾಡಾನೆ ದಾಳಿ ಮಾಡಿದ್ದು, ಪಸಲು ಬರುವ 10 ತೆಂಗಿನ ಮರ, 40 ಅಡಿಕೆ ಮರ ಹಾಗೂ ಬಾಳೆಗಿಡಗಳನ್ನೂ ನಾಶ ಮಾಡಿರುತ್ತದೆ.

ಸುಮಾರು ಒಂದು ವರ್ಷದ ಹಿಂದೆಯೂ ಇವರ ಮನೆಗೆ ಇದೇ ರೀತಿ ಕಾಡಾನೆ ದಾಳಿ ಮಾಡಿ ಅಪಾರ ಹಾನಿಯನ್ನು ಉಂಟು ಮಾಡಿರುತ್ತದೆ.

ಸುಮಾರು ಎರಡು ವರ್ಷಗಳಿಂದ ಈಚೆ ಈ ಭಾಗದಲ್ಲಿ ಹಲವಾರು ಬಾರಿ ಬೇರೆ ಬೇರೆ ಕೃಷಿ ಜಾಗಗಳಿಗೆ ಧಾಳಿ ಮಾಡಿದ್ದು ಒಟ್ಟಾರೆಯಾಗಿ ಶಿಶಿಲ,ಶಿಬಾಜೆ, ಅರಸಿನಮಕ್ಕಿ ಭಾಗದಲ್ಲಿ ಆನೆಯ ಉಪಟಲ ದೊಡ್ಡ ಸಮಸ್ಯೆಯಾಗಿ ಕಾಣುತ್ತಿದ್ದು, ಪ್ರತಿದಿನವೂ ಈ ಭಾಗದ ಜನರಲ್ಲಿ ಆನೆಯದ್ದೆ ಮಾತು ಆ ಮನೆ ಜಾಗಕ್ಕೆ ಆನೆ ಬಂತು ಈ ಮನೆಯ ಜಾಗಕ್ಕೆ ಆನೆ ಬಂತು ಈ ಸಲ ರಬ್ಬರ್ ಟ್ಯಾಪಿಂಗ್ ಗೆ ಮುಂಜಾನೆ ಎದ್ದು ಹೇಗೆ ಹೋಗುವುದು ಎಂಬುದೇ ಇಲ್ಲಿನ ಜನಸಾಮಾನ್ಯರ ಮಾತಾಗಿದೆ.

ಒಟ್ಟಾರೆಯಾಗಿ ತೀವ್ರ ಭಯಭೀತರಾಗಿರುವ ಈ ಭಾಗದ ಜನರು ಇದೇ ರೀತಿಯಾದರೆ ಮುಂದೆ ಎಲ್ಲಾ ಕೃಷಿ ಕಾರ್ಯಗಳಿಗೂ ತೊಂದರೆ, ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೂ ತೊಂದರೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.ಅರಣ್ಯ ಇಲಾಖೆಯವರಿಗೆ ತಿಳಿಸಿದರು ಏನೂ ಪ್ರಯೋಜನವಿಲ್ಲ ಸಂಭಂದ ಪಟ್ಟ ಅಧಿಕಾರಿಗಳು ಜನ ಪ್ರತಿನಿಧಿಗಳು ಖುದ್ದು ಭೇಟಿ ನೀಡಿ ಸರಕಾರದ ಗಮನ ಸೆಳೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here