ಉಜಿರೆ: ಸರ್ಕಾರಿ ಉನ್ನತೀಕರಿಸಿದ ಪ್ರಾರ್ಥಮಿಕ ಶಾಲೆ ಬಧನಾಜೆಯಲ್ಲಿ 2023-24 ನೇ ಶೈಕ್ಷಣಿಕ ವರ್ಷದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಹಳೇಪೇಟೆ ಉಜಿರೆ ಕ್ಲಸ್ಟರ್ ನ 15 ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಹಿರಿಯ ವಿಭಾಗ, ಕಿರಿಯ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಿತು. ವಿಜೇತರಿಗೆ ಇಲಾಖೆಯಿಂದ ಬಹುಮಾನ ನೀಡಲಾಯಿತು.ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ಉದ್ಘಾಟಿಸಿದರು.ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅನಿಲ್ ಡಿಸೋಜಾ, ಅತಿಥಿಗಳಾಗಿ ವಿರುಪಾಕ್ಷಪ್ಪ ಹೆಚ್.ಎಸ್, ಅಕ್ಷರ ದಾಸೋಹ ನಿರ್ದೇಶಕಿ ತಾರಾಕೇಸರಿ, ಪ್ರಭಾರ ಸಮನ್ವಯಾಧಿಕಾರಿ ಮೋಹನ್ ಕುಮಾರ್, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರತಿಮಾ, ಗ್ರಾಮ ಪಂಚಾಯತ್ ಸದಸ್ಯ ಇಲ್ಯಾಸ್ ಸವಿತಾ, ಎನ್ ಪಿ ಎಸ್ ಕರ್ನಾಟಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ಮಾಚಾರ್, ಜ್ಯೋತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಪ್ರತಿಭಾ ಕುಮಾರಿ ಕಾರ್ಯಕ್ರಮವನ್ನು ನಿರೂಪಿಸಿದರು.ಶಾಲೆಯ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.ಮುಖ್ಯೋಪಾಧ್ಯಾಯನಿ ಶಾರದಾ ಸ್ವಾಗತಿಸಿದರು.ಶಿಕ್ಷಕಿ ಭಾರತಿ ವಂದಿಸಿದರು.