ಪದ್ಮುಂಜ ಕಾಮ್ರೇಡ್ ಅಣ್ಣು.ಸಿ ನಿಧನ

0

ಪದ್ಮುಂಜ: ಸಿಪಿಐ(ಎಂ) ಪಕ್ಷದಲ್ಲಿ ಗುರುತಿಸಿಕೊಂಡು ಪಂಚಾಯತುಚುನಾವಣೆಯಲ್ಲೂ ಸ್ಪರ್ಧೆ ನೀಡುತ್ತಾ ಕಮ್ಯೂನಿಸ್ ಅಣ್ಣು ಎಂದೇ ಪ್ರಸಿದ್ದಿ ಪಡೆದ ಅಣ್ಣು ಸಿ. ಪದ್ಮುಂಜ ಸೆ. 5 ರಂದು ಸ್ವಲ್ಪ ಸಮಯದ ಅಸೌಖ್ಯದ ಬಳಿಕ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ ವಿಮಲ ಅವರನ್ನು ಅಗಲಿರುತ್ತಾರೆ. ಇವರು 1996 ರಿಂದ ನಿರಂತರವಾಗಿ ಬೆಳ್ತಂಗಡಿ ತಾಲೂಕು ಪಕ್ಷದ ಸಂಪರ್ಕದಲ್ಲಿದ್ದು, ಅದಕ್ಕೂ ಮೊದಲು ಪುತ್ತೂರು ತಾಲೂಕಿನ ಪಕ್ಷದ ಸಂಪರ್ಕದಲ್ಲಿದ್ದು ತಾಲೂಕು/ಜಿಲ್ಲಾ ಪಂಚಾಯತು ಚುನಾವಣೆಯಲ್ಲೂ 3 ಅವರು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದರು.

ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದ ಅವರು ಪಕ್ಷಕ್ಕಾಗಿ ಪ್ರಾಮಾಣಿಕ, ನಿಸ್ವಾರ್ಥ ಸೇವೆ ಸಲ್ಲಿಸಿದವರಾಗಿರುತ್ತಾರೆ.

LEAVE A REPLY

Please enter your comment!
Please enter your name here