ಬದನಾಜೆ: ಕಳೆದ 37 ವರ್ಷಗಳ ಕಾಲ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ಕರ್ತವ್ಯವನ್ನು ನಿರ್ವಹಿಸಿ ನಿವೃತ್ತಿಯನ್ನು ಹೊಂದಿದ ಮುಖ್ಯ ಶಿಕ್ಷಕಿ ಶಾರದಾ ಸ.ಉ.ಪ್ರಾ.ಶಾಲೆ ಬದನಾಜೆ ಹಾಗೂ ಸ.ಉ.ಪ್ರಾ.ಶಾಲೆ ಬದನಾಜೆ ಇಲ್ಲಿಂದ ವರ್ಗಾವಣೆಗೊಂಡು ಮಾದರಿ ಶಾಲೆ ಬೆಳ್ತಂಗಡಿಗೆ ತೆರಳಿರುವ ಅಖಿಲ್ ಕುಮಾರ್ ಇವರ ಬೀಳ್ಕೊಡುಗೆ ಸಮಾರಂಭವು ಆ.30ರಂದು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಬದನಾಜೆ ಇಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಬದನಾಜೆ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅನಿಲ್ ಡಿಸೋಜ ಇವರು ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.ಉಜಿರೆ ಗ್ರಾಮ ಪಂಚಾಯತ ಸದಸ್ಯೆ ಸವಿತಾ, ಲಲಿತ ಹಾಗೂ ಗುರುಪ್ರಸಾದ್, ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ನವೀನ, ಪ್ರೌಢಶಾಲಾ ಮುಖ್ಯ ಗುರುಗಳಾದ ಜಮುನಾ, ನಿವೃತ್ತ ಮುಖ್ಯ ಗುರುಗಳಾದ ಲಕ್ಷ್ಮಣ ಪೂಜಾರಿ, ಶೈಕ್ಷಣಿಕ ಮಾರ್ಗದರ್ಶಿಗಳಾದ ಬಾಬು ಗೌಡ, ಶಾಲಾ ದಾನಿಗಳದ ರಾಮಯ್ಯಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೋಹನ್ ಪರಂಗಾಜೆ, ಪ್ರಗತಿ ಯುವಕ ಮಂಡಲದ ಅಧ್ಯಕ್ಷರಾದ ಸೋಮಶೇಖರ್, ಪ್ರಗತಿ ಯುವತಿ ಮಂಡಲದ ಅಧ್ಯಕ್ಷೆ ಅರುಣಾಕ್ಷಿ, ಮಾಯ ಶಾಲೆಯ ಮುಖ್ಯ ಗುರುಗಳಾದ ವಿಠಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಸುರೇಶ್ ಮಾಚಾರ್ ಇವರುಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾರದಾ ಮುಖ್ಯ ಗುರುಗಳು ಹಾಗೂ ಅಖಿಲ್ ಕುಮಾರ್ ದೈಹಿಕ ಶಿಕ್ಷಣ ಶಿಕ್ಷಕರು ಇವರಿಗೆ ಶಾಲಾ ಶಿಕ್ಷಕರ, ಶಾಲಾ ವಿದ್ಯಾರ್ಥಿಗಳ, ಎಸ್.ಡಿ.ಎಂ.ಸಿ., ಪೋಷಕರ, ಊರವರ, ವಿಧ್ಯಾಭಿಮಾನಿಗಳ, ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಗೌರವ ಪೂರ್ವಕವಾಗಿ ಶುಭವಿದಾಯ ಕೋರಲಾಯಿತು.ಪ್ರಗತಿ ಯುವಕ ಮತ್ತು ಯುವತಿ ಮಂಡಲದ ವತಿಯಿಂದಲೂ ಸನ್ಮಾನಿಸಲಾಯಿತು.ಸನ್ಮಾನ ಪತ್ರವನ್ನು ಸಹ ಶಿಕ್ಷಕಿಯಾದ ಭಾರತಿ ಹಾಗೂ ಅತಿಥಿ ಶಿಕ್ಷಕಿಯಾದ ಪ್ರೀತಿ ಇವರು ವಾಚಿಸಿದರು.
ಸಹ ಶಿಕ್ಷಕಿ ಲಲಿತ ಹಾಗೂ ಮಮತಾ ಬೀಳ್ಕೊಡಲಿರುವರ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಗುರುತಿಸುವ ಕಾರ್ಯವನ್ನು ಸಹಶಿಕ್ಷಕಿ ಪ್ರತಿಭಾ ಇವರು ನಿರ್ವಹಿಸಿದರು. ಸಹಶಿಕ್ಷಕಿ ಇಂದಿರಾ.ಪಿ ಇವರು ಧನ್ಯವಾದವಿತ್ತರು, ಕಾರ್ಯಕ್ರಮವನ್ನು ಜಯಲಕ್ಷ್ಮಿ ನಿರೂಪಿಸಿದರು.