ಬಂದಾರು ಗ್ರಾ.ಪಂನಲ್ಲಿ ನಿಕಟಪೂರ್ವ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ

0

ಬಂದಾರು: ಆ.31ರಂದು ಬಂದಾರು ಗ್ರಾಮ ಪಂಚಾಯತ್ ನಲ್ಲಿ ಹಿಂದಿನ ಎರಡೂವರೆ ವರ್ಷದ ತಮ್ಮ ಅವಧಿಯಲ್ಲಿ ಉತ್ತಮ ರೀತಿಯಲ್ಲಿ ಆಡಳಿತ ನಿರ್ವಹಣೆ ನಿರ್ವಹಿಸಿ, ಜನಮನ್ನಣೆಗಳಿಸಿರುವ ನಿಕಟಪೂರ್ವ ಅಧ್ಯಕ್ಷೆ ಪರಮೇಶ್ವರಿ ಕೆ ಗೌಡ ಪುಯಿಲ ಹಾಗೂ ನಿಕಟಪೂರ್ವ ಉಪಾಧ್ಯಕ್ಷ ಗಂಗಾಧರ ಪೂಜಾರಿ ಮುಗೆರಡ್ಕ ಇವರಿಗೆ ಸಾಮಾನ್ಯ ಸಭೆಯ ಸಂದರ್ಭ ಅಭಿನಂದನಾ ಕಾರ್ಯಕ್ರಮ ಪಂಚಾಯತ್ ಸಭಾಂಗಣದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಉಪಾಧ್ಯಕ್ಷೆ ಪುಷ್ಪಾವತಿ ಬರಮೇಲು, ಅಭಿವೃದ್ದಿ ಅಧಿಕಾರಿ ಮೋಹನ್ ಬಂಗೇರ, ಗ್ರಾಮ ಕರಣಿಕರಾದ ರಫೀಕ್ ಮುಲ್ಲಾ, ಸದಸ್ಯರಾದ ಬಾಲಕೃಷ್ಣ ಗೌಡ ಮುಗೆರಡ್ಕ, ಚೇತನ್ ಪಾಲ್ತಿಮಾರ್, ಶಿವ ಗೌಡ ಹೇವ, ವಿಮಲಾ, ಭಾರತಿ ಕೊಡಿಯೇಲು, ಅನಿತಾ ಕುರುಡoಗೆ, ಸುಚಿತ್ರ, ಪವಿತ್ರ, ಮಂಜುಶ್ರೀ ಊoತನಾಜೆ, ಶಾಂತ ಹಾಗೂ ಸಿಬ್ಬಂದಿಗಳಾದ ಶಾಂತಿ, ಸರೋಜಿನಿ, ಪ್ರವೀಣ್ ಗೌಡ, ದಿನಕರ ಗೌಡ, ಮೋಹನ್ ಬಂಗೇರ, ಸುಪ್ರೀತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here