ಅರಸಿನಮಕ್ಕಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ತಂಗಡಿ ವತಿಯಿಂದ ಸ್ವಉದ್ಯೋಗ ಪ್ರೇರಣ ಶಿಬಿರವು ಅರಸಿನಮಕ್ಕಿಯ ಕುಲಾಲ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಧೀರ್ ಕುಮಾರ್ (ಗ್ರಾಮ ಪಂಚಾಯತಿ ಉಪಾಧ್ಯಕ್ಷರು )ವಹಿಸಿದ್ದರು.ಸಿಎ ಬ್ಯಾಂಕ್ ಅರಸಿನಮಕ್ಕಿ ಇದರ ನಿರ್ದೇಶಕರಾದ ಧರ್ಮರಾಜ್ ಅಡ್ಕಾಡಿ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಮಂಜುಳ ಕಾರಂತ್ ತಾಲೂಕು ಜನ ಜಾಗೃತಿ ಸದಸ್ಯರು, ಚೆನ್ನಪ್ಪ ಗೌಡ ತಾಲೂಕು ಜನ ಜಾಗೃತಿ ಸದಸ್ಯರು, ಜೇಮ್ಸ್ ಅಬ್ರಾಮ್ ರುಡ್ ಸೆಟ್ ತರಬೇತಿ ಸಂಸ್ಥೆಯ ಉಪನ್ಯಾಸಕರು ಆಗಮಿಸಿದ್ದರು.
ಅರಸಿನಮಕ್ಕಿ ವಲಯದ ಮೇಲ್ವಿಚಾರಕರಾದ ಶಶಿಕಲಾ ಕಾರ್ಯಕ್ರಮವನ್ನು ನಿರೂಪಿಸಿದರು.ಪೆರ್ಲ ವಲಯ ಸೇವಾ ಪ್ರತಿನಿಧಿ ಅರುಣಾ ಸ್ವಾಗತಿಸಿದರು.
ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಯೋಜನೆಯ ಮಹತ್ವ ಮತ್ತು ಒಬ್ಬ ವ್ಯಕ್ತಿ ಸ್ವಾವಲಂಬಿಯಾಗಿ ಬೆಳೆಯಲು ಯೋಜನೆಯ ಹಲವಾರು ಕಾರ್ಯಕ್ರಮಗಳ ಬಗ್ಗೆ ಹೆಮ್ಮೆಯಿಂದ ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು.ಹಾಗೆ ರುಡ್ ಸೆಟ್ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಜೇಮ್ಸ್ ಅಬ್ರಾಮ್ ಇವರು ಸ್ವಉದ್ಯೋಗದ ಬಗ್ಗೆ ಜನರನ್ನು ಪ್ರೇರೇಪಿಸುವಲ್ಲಿ ಮತ್ತು ಸ್ವ ಉದ್ಯೋಗವನ್ನು ಮಾಡಲು ಬೇಕಾದ ತರಬೇತಿಗಳ ಬಗ್ಗೆ ಸಹಕಾರವನ್ನು ನೀಡುವುದರ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವುದರ ಬಗ್ಗೆ ತಿಳಿಸಿದರು.