ಗುರುದೇವ ಮಠದಲ್ಲಿ ಸ್ವಾಮೀಜಿಯವರ ಚಾತುರ್ಮಸ್ಯ ಗಣ್ಯ ಭೇಟಿ ಗುರು ಭಕ್ತಿಸಾರ ಧ್ವನಿ ಸುರುಳಿ ಬಿಡುಗಡೆ

0

ಧರ್ಮಸ್ಥಳ :ಶ್ರೀ ರಾಮಕ್ಷೇತ್ರ ಮಹಾ ಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜೀ ಯವರ 4ನೇ ವರ್ಷದ ಚಾತುರ್ಮಸ್ಯ ವೃತಚರಣೆ ಸಂದರ್ಭದ ಆ.27ರಂದು ಸ್ವಾಮೀಜಿಯವರು ಆಶೀರ್ವಚನ ನೀಡಿದರು.ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ಶಾಸಕರ ವೇದವ್ಯಾಸ ಕಾಮತ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ ಭಾಗಾವಹಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಸ್ವಾಮೀಜಿಯವರ ಶಿಷ್ಯ ಅಜಿತ್ ಪೂಜಾರಿ ಕನ್ಯಾಡಿ ಇವರ ಸಾಹಿತ್ಯ ಮತ್ತು ಗಾಯನದ “ಗುರು ಭಕ್ತಿ ಸಾರ ” ಧ್ವನಿ ಸುರುಳಿಯನ್ನು ಸ್ವಾಮೀಜಿ ಬಿಡುಗಡೆ ಗೊಳಿಸಿದರು.

ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟೆ ಹೊಳೆ, ಹಾಲಾಡಿ ಶಾಸಕ ಕಿರಣ್ ಕೂಡ್ಗಿ ,ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಬೆಳ್ತಂಗಡಿ ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ ಮಂಗಳೂರು ಕಾರ್ಪೋರೇಟರ್ ಕಿರಣ್ ಕುಮಾರ್,ಶ್ರೀ ರಾಮ ಕ್ಷೇತ್ರ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ತಾಲೂಕು ಸಂಚಾಲಕ ಜಯಂತ ಕೋಟ್ಯಾನ್, ತಾಲೂಕು ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲ ಬೈಲು, ವಸಂತ ನಾಯ್ಕ ಸಿದ್ದಾಪುರ, ಸಿ. ಆರ್. ನಾಯ್ಕ್ ಸಿದ್ದಾಪುರ, ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು, ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತ್ನಾಕರ ಬುಣ್ಣನ್, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ, ಧರ್ಮಸ್ಥಳ ಮಂಡಲ ಮಾಜಿ ಪ್ರಧಾನ ಸುಂದರ ಗೌಡ, ಪಿಡಿಓ ಗಾಯತ್ರಿ, ಮಂಗಳೂರು ಬಿಜೆಪಿ ಮಂಡಲ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ಪ್ರಶಾಂತ ಪಾರೆಂಕಿ, ರವೀಂದ್ರ ಪೂಜಾರಿ ಆರ್ಲ, ಕೃಷ್ಣಪ್ಪ ಗುಡಿಗಾರ, ರಮಾನಂದ ಕನ್ಯಾಡಿ, ಬೆಂಗಳೂರು ಆರ್ಯ ಈಡಿಗ ವೇದಿಕೆ ಅಧ್ಯಕ್ಷ ಈಶ್ವರ್, ಮೊದಲದವರು ಭಾಗವಹಿಸಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.

ಸ್ವಾಮೀಜಿ ಇವರನ್ನು ಗೌರವಿಸಿದರು.ಮಠದ ಟ್ರಷ್ಟಿ ತುಕಾರಾಮ ಸಾಲಿಯಾನ್ ಸ್ವಾಗತಿಸಿ, ಸೀತಾರಾಮ ಬಿ. ಎಸ್. ಬೆಳಾಲು ವಂದಿಸಿದರು.ಕಾರ್ಯಕ್ರಮ ಮೊದಲು ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಮತ್ತು ಭಟ್ಕಳದ ಭಕ್ತರಿಂದ ಸ್ವಾಮೀಜಿಯವರ ಪಾದುಕ ಪೂಜೆ, ಜನಾರ್ಧನ ಬೆಳಾಲು ಮತ್ತು ಮಂಗಳೂರು ತಂಡದಿಂದ ಭಜನೆ ನಡೆಯಿತು.

LEAVE A REPLY

Please enter your comment!
Please enter your name here