


ಉಜಿರೆ: ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಮಹಿಳಾ ವೇದಿಕೆಯ ನೇತೃತ್ವದಲ್ಲಿ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೌಹಾರ್ದ ಸಹಕಾರಿ (ನಿ) ಇವರ ಸಹಕಾರದೊಂದಿಗೆ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘ (ರಿ ) ಉಜಿರೆ ಇದರ ಸಹಯೋಗದೊಂದಿಗೆ ಶ್ರೀ ವಿಧ್ವಾನ್ ಜಯಂತ್ ಭಟ್ ಉಡುಪಿ ಇವರ ಪೌರೋಹಿತ್ವದಲ್ಲಿ ಆ.25ರಂದು ಸುಮಾರು 75 ವೃತದಾರಿಗಳ ಭಾಗವಹಿಸುವಿಕೆಯಿಂದ ಪೂಜೆಯು ಸಂಪನ್ನಗೊಂಡಿತು.

ಸಭಾ ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಅಪರ್ಣ ಶಿವಕಾಂತ ಗೌಡರವರು ಅಧ್ಯಕ್ಷತೆ ವಹಿಸಿದರು.ಎಸ್.ಡಿ.ಎಮ್ ಕಾಲೇಜಿನ ಉಪನ್ಯಾಸಕಿ ಸಂಗೀತ ಮುಖ್ಯ ಅಥಿತಿಯಾಗಿ ವರಮಹಾಲಕ್ಷ್ಮಿ ಪೂಜೆಯ ಮಹತ್ವದ ಬಗ್ಗೆ ಮಾತನಾಡಿದರು.



ಈ ಸಂದರ್ಭದಲ್ಲಿ ಒಕ್ಕಲಿಗ ಗೌಡರ ಸಂಘ ಉಜಿರೆ ಇದರ ಅಧ್ಯಕ್ಷ ಕೇರಿಮಾರು ಬಾಲಕೃಷ್ಣ ಗೌಡ ಹಾಗೂ ಕಾಲಭೈರವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ರಂಜನ್ ಜಿ ಗೌಡ, ಯುವ ಮಹಿಳಾ ವೇದಿಕೆಯ ಅಧ್ಯಕ್ಷೆ ಅನುಪಮಾ ಸತೀಶ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೀತಾ ಬಡೆಕೊಟ್ಟು ಸ್ವಾಗತಿಸಿ, ಯಶೋದಾ ರಾಘವೇಂದ್ರ ಗೌಡ ಧನ್ಯವಾದ ವಿತ್ತರು, ಬಾಲಕೃಷ್ಣ ಗೌಡ ಕಲ್ಲಾಜೆ ಕಾರ್ಯಕ್ರಮ ಪ್ರಸ್ತಾಪಿಸಿದರು.


            






