ಮೂಡುಕೋಡಿ: ನಡ್ತಿಕಲ್ಲು ಶ್ರೀ ರಾಮ ಮಹಿಳಾ ಸಮಿತಿಯಲ್ಲಿ ವರಮಹಾಲಕ್ಷ್ಮಿ ಪೂಜೆ

0

ಮೂಡುಕೋಡಿ: ಶ್ರೀ ರಾಮ ಮಹಿಳಾ ಸಮಿತಿ ನಡ್ತಿಕಲ್ಲು ಮೂಡುಕೋಡಿ ಇದರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೂಡುಕೋಡಿ ಶ್ರೀ ರಾಮ ಭಜನಾ ಮಂಡಳಿ ನಡ್ತಿಕಲ್ಲು ಮೂಡುಕೋಡಿ ಇವರ ಸಹಕಾರದೊಂದಿಗೆ ಪ್ರಥಮ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ನಡ್ತಿಕಲ್ಲು ಭಜನಾ ಮಂದಿರದಲ್ಲಿ ಜರುಗಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಮಹಿಳಾ ಸಮಿತಿಯ ಉಪಾಧ್ಯಕ್ಷೆ ಮಮತಾ ಧಾರ್ಮಿಕ ಪ್ರವಚನವನ್ನು ನಂದಿತಾ ಕಾಮತ್ ವೇಣೂರು ಇವರು ನೀಡಿದರು.

ಮುಖ್ಯ ಅತಿಥಿಯಾಗಿ ಯೋಜನೆಯ ಸಮನ್ವಯಾಧಿಕಾರಿ ಹೇಮಲತಾ ಹೆಗ್ಡೆ, ಒಕ್ಕೂಟದ ಅಧ್ಯಕ್ಷ ಸದಾನಂದ ಪೂಜಾರಿ, ಭಜನಾ ಮಂಡಳಿಯ ಅಧ್ಯಕ್ಷ ಪ್ರವೀಣ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುನೀತಾ ಸ್ವಾಗತಿಸಿದರು, ಗೀತಾ ಧನ್ಯವಾದವಿತ್ತರು ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಸಮಿತಿಯ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here