ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಚಂದ್ರ‍ಯಾನ ಮೂರನೇ ಯಾನದ ವೀಕ್ಷಣೆ

0

ಚಂದ್ರ‍ಯಾನದ ಸರಣಿಯ ಮೂರನೇ ಯಾನದ ವಿಕ್ರಮ್ ಚಂದ್ರನ ಅಂಗಳಕ್ಕೆ ಇಂದು ಬುಧವಾರ ಕಾಲಿಡುವ ಅಂತಿಮ ರೋಚಕ ಕ್ಷಣಗಳನ್ನು ನಾನು ಕೂಡಾ ಅತ್ಯಂತ ಕುತೂಹಲ ಮತ್ತು ಆಸಕ್ತಿಯಿಂದ ವೀಕ್ಷಿಸಿ ಸಂತಸ ಹಾಗೂ ಅಚ್ಚರಿ ಪಟ್ಟಿದ್ದೇನೆ.ಈ ಅದ್ಭುತ ಯಶಸ್ಸಿಗೆ ಭಗೀರಥ ಪ್ರಯತ್ನ ಮಾಡಿದ ಬಾಹ್ಯಾಕಾಶ ವಿಜ್ಞಾನಿಗಳೆಲ್ಲರನ್ನೂ ನಾನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.ಇದೊಂದು ವಿಶ್ವದಾಖಲೆಯಾಗಿದ್ದು ಭಾರತದ ಕೀರ್ತಿ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಹೆಚ್ಚಾಗಿದೆ.ಚಂದ್ರನನ್ನು ಈ ಸಂಭ್ರಮ-ಸಡಗರದ ಸಂದರ್ಭದಲ್ಲಿ ಸ್ಮರಿಸಿ ದೂರದಿಂದಲೇ ಪರಿಚಯವಾದ ಚಂದ್ರನನ್ನು ಅತೀ ಸಮೀಪಕ್ಕೆ ತಂದ ಎಲ್ಲಾ ಬಾಹ್ಯಾಕಾಶ ವಿಜ್ಞಾನಿಗಳನ್ನು ಮತ್ತು ತಂತ್ರಜ್ಞರನ್ನು ನಮ್ಮ ದೇಶದ ಎಲ್ಲಾ ಪ್ರಜೆಗಳ ಪರವಾಗಿ ನಾನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.ಎಲ್ಲರಿಗೂ ಉಜ್ವಲ ಭವಿಷ್ಯವನ್ನು ಹಾರೈಸುತ್ತಾ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮುಂದೆ ಇನ್ನೂ ಹೆಚ್ಚಿನ ಸೇವೆ-ಸಾಧನೆ ಮಾಡಿ ಯಶಸ್ಸನ್ನು ಪಡೆಯುವಂತೆ ಶ್ರೀ ಮಂಜುನಾಥ ಸ್ವಾಮಿ ಹಾಗೂ ಧರ್ಮದೇವತೆಗಳು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿ.ವೀರೇಂದ್ರ ಹೆಗ್ಗಡೆ ನುಡಿದರು.

p>

LEAVE A REPLY

Please enter your comment!
Please enter your name here