ಸುಲ್ಕೇರಿಮೊಗ್ರು: ಅಳದಂಗಡಿ ಗ್ರಾ.ಪಂ ನ ನೂತನ ಅಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ

0

ಸುಲ್ಕೇರಿಮೊಗ್ರು: ಸುಲ್ಕೇರಿಮೊಗ್ರು ಶಾಲಾಭಿವೃಧ್ಧಿ ಸಮಿತಿ ವತಿಯಿಂದ ಅಳದಂಗಡಿ ಗ್ರಾಮ ಪಂಚಾಯತ್‌ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸರಸ್ವತಿ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಶಾಲಿನಿ ಇವರಿಗೆ ಅಭಿನಂದನಾ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಲ್ಕೇರಿಮೊಗ್ರುವಿನಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಶಾಲಾಭಿವೃಧ್ಧಿ ಸಮಿತಿಯ ಅಧ್ಯಕ್ಷರಾದ ರೇವತಿ, ಕಾರ್ಯದರ್ಶಿ ನಳಿನಿ, ಅಳದಂಗಡಿ ಗ್ರಾಮ ಪಂಚಾಯತ್‌ ಸದಸ್ಯೆ ರೂಪಶ್ರೀ, ಶಾಲಾ ಮುಖ್ಯೋಪದ್ಯಾಯರಾದ ಸುಬ್ರಹ್ಮಣ್ಯ ಭಟ್‌, ಸಹ ಶಿಕ್ಷಕರು‌, ಮಾಜಿ ಗ್ರಾಮ ಪಂಚಾಯತ್‌ ಸದಸ್ಯ ಸತೀಶ್‌ ಎಸ್‌,ಎಂ., ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರಸಾದ್‌ ಪಿಂಟೋ, ಹಳೆವಿದ್ಯಾರ್ಥಿಗಳು, ಮಕ್ಕಳ ಹೆತ್ತವರು, ಪೋಷಕರು ಹಾಗೂ ಊರ ವಿದ್ಯಾಭಿಮಾನಿಗಳು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here