ಅಳದಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯಕ್ಕೆ ಮೀಸಲಾತಿ ನಿಗದಿಯಾಗಿದ್ದು ಅಧ್ಯಕ್ಷೆ ಸ್ಥಾನಕ್ಕೆ ಸರಸ್ವತಿ ಮತ್ತು ಉಪಾದ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿದ್ದು, ಉಪಾಧ್ಯಕ್ಷರಾಗಿ ಶಾಲಿನಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಒಟ್ಟು 12 ಜನ ಸದಸ್ಯ ಬಲ ಹೊಂದಿರುವ ಈ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ 9 ಜನ, 3ಜನ ಕಾಂಗ್ರೆಸ್ ಬೆಂಬಲಿತರು.ಬಿಜೆಪಿ ಬೆಂಬಲಿತ ಸರಸ್ವತಿ, ಸೌಮ್ಯ ಮತ್ತು ಕಾಂಗ್ರೆಸ್ ಬೆಂಬಲಿತ ಪ್ರಶಾಂತ್ ವೇಗಸ್ ನಾಮಪತ್ರ ಸಲ್ಲಿಸಿದ್ದರು.
ಉಪಾಧ್ಯಕ್ಷೆ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಶಾಲಿನಿ ಹಾಗೂ ರೂಪಶ್ರೀ ನಾಮಪತ್ರ ಸಲ್ಲಿಸಿದ್ದರು.ಅಧ್ಯಕ್ಷ ಸ್ಥಾನಕ್ಕೆ ಪ್ರಶಾಂತ್ ವೇಗಸ್ ಮತ್ತು ಸೌಮ್ಯ ರವರು ನಾಮ ಪತ್ರ ವಾಪಾಸ್ ಪಡೆದಿದ್ದರಿಂದ ಅಧ್ಯಕ್ಷೆಯಾಗಿ ಸರಸ್ವತಿ ಆಯ್ಕೆಯಾದರು.ಉಪಾಧ್ಯಕ್ಷ ಸ್ಥಾನಕ್ಕೆ ಶಾಲಿನಿ ಮತ್ತು ರೂಪಶ್ರೀ ನಾಮ ಪತ್ರ ಸಲ್ಲಿಸಿದ್ದರಿಂದ, ರೂಪಶ್ರೀ ನಾಮಪತ್ರ ವಾಪಾಸ್ ಪಡೆದು, ಶಾಲಿನಿಯವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ತಾಲೂಕ್ ಸಮಾಜ ಕಲ್ಯಾಣ ಅಧಿಕಾರಿ ಹೇಮಚಂದ್ರ ಚುನಾವಣಾ ಪ್ರಕ್ರಿಯೆಯನ್ನು ನಡೆಸಿದರು.ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ್ ಸಹಕರಿಸಿದರು.