ನಾಲ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ವಸಂತ ಶೆಟ್ಟಿ, ಉಪಾಧ್ಯಕ್ಷರಾಗಿ ಮಥಾಯಿಸ್ ಕ್ರಾಸ್ತ ಆಯ್ಕೆ

0

ಬಳಂಜ: ನಾಲ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ವಸಂತ ಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ ಮಥಾಯಿಸ್‌ ಕ್ರಾಸ್ತ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ವಸಂತ ಶೆಟ್ಟಿ ಹಾಗೂ ಮ್ಯಾಕ್ಸ್ ಕ್ರಾಸ್ತ ಸ್ಪರ್ಧಿಸಿದ್ದು ವಸಂತ ಶೆಟ್ಟಿ 8 ಮತ ಪಡೆದು ಆಯ್ಕೆಯಾದರು.ಮ್ಯಾಕ್ಸ್ ಕ್ರಾಸ್ತ 4 ಮತ ಪಡೆದರು.

ಉಪಾಧ್ಯಕ್ಷ ಸ್ಥಾನಕ್ಕೆ ಮಥಾಯಿ ಕ್ರಾಸ್ತ ಅವಿರೋಧವಾಗಿ ಆಯ್ಕೆಯಾದರು.

ನಿರ್ದೇಶಕರುಗಳಾಗಿ ಶೀಲಾ, ಮಾಕ್ಸಿಂ ಕ್ರಾಸ್ತ, ನಾರಾಯಣ ಭಟ್, ವಿಠಲ, ವಿಕ್ಟರ್ ಕ್ರಾಸ್ತ, ಅನಿಲ್ ಭಟ್, ಕೃಷ್ಣಪ್ಪ ಪೂಜಾರಿ, ಹರೀಶ್ ಶೆಟ್ಟಿ, ಮೊಂತೀ ಡಿಸೋಜ, ನಾಣ್ಯಪ್ಪ ಪೂಜಾರಿ ಎಲ್ಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಬಿ. ನಾಗೇಂದ್ರ ಪ್ರಕ್ರಿಯೆ ನಡೆಸಿದರು. ಕಾರ್ಯದರ್ಶಿ ವೀಣಾ ಹೊಳ್ಳ, ಸಿಬ್ಬಂದಿಗಳು ಸಹಕರಿಸಿದರು

p>

LEAVE A REPLY

Please enter your comment!
Please enter your name here