ಮಚ್ಚಿನ: ಮಚ್ಚಿನ ಗ್ರಾಮ ಪಂಚಾಯತ್ ಸ್ವಚ್ಛಸಂಕೀರ್ಣ ಘಟಕ, ಹಿಂದೂ ರುದ್ರಭೂಮಿ ಇದರ ಲೋಕಾರ್ಪಣೆ, ಅಮೃತ ಉದ್ಯಾನವನ, ಗ್ರಾಮ ಪಂಚಾಯತ್ ಕಚೇರಿಗೆ ಸೋಲಾರ್ ಅಳವಡಿಕೆ, ಗ್ರಾಮ ಪಂಚಾಯತ್‌ನ ನೂತನ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ, ಪೆಟ್ರೊನೆಟ್ ಸಂಸ್ಥೆಯಿಂದ ನೀಡಲಾದ ‘ಸ್ವಚ್ಛವಾಹಿನಿ’ ಲೋಕಾರ್ಪಣೆ, ಮಚ್ಚಿನ ಗ್ರಾಮದ ವಾಣಿಜ್ಯ ಮಳಿಗೆಗಳಿಗೆ ಕಸದ ಬುಟ್ಟಿ ವಿತರಣೆ, ಲೋಕಾರ್ಪಣೆ ಕಾರ್ಯಕ್ರಮ ಆ.9ರಂದು ಮಚ್ಚಿನ ಸಭಾಭವನದಲ್ಲಿ ಜರಗಿತು.
ಗ್ರಾಮ ಪಂಚಾಯತ್ ಮಚ್ಚಿನ ಅಧ್ಯಕ್ಷರು ಚಂದ್ರಕಾಂತ ನಿಡ್ಡಾಜೆ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡೀಕಮ್ಮ, ಉಪಾಧ್ಯಕ್ಷರು, ಗ್ರಾಮ ಪಂಚಾಯತ್, ಮಚ್ಚಿನ ಹರ್ಷ ಸಂಪಿಗೆತ್ತಾಯ, ಅನುವಂಶೀಯ ಆಡಳಿತ ಮೊಕ್ತೇಸರರು, ಅನಂತೇಶ್ವರ ಸ್ವಾಮಿ ದೇವಸ್ಥಾನ, ಬಳ್ಳಮಂಜ,
ಬಿ. ಪದ್ಮನಾಭ ಸುವರ್ಣ, ಚೀಫ್ ರೀಜನಲ್ ಮ್ಯಾನೇಜರ್ ಬಜಾಜ್ ಅಲಾಯನ್ಸ್ ಲೈಫ್ ಇನ್ಸುರೆನ್ಸ್ ಮಂಗಳೂರು, ಡಾ.ಕೆ.ಎಂ.ಮಾಧವ ಶೆಟ್ಟಿ, ಗೌರವಾಧ್ಯಕ್ಷರು, ಹಿಂದೂ ರುದ್ರಭೂಮಿ, ಮಚ್ಚಿನ, ಮಹಾಬಲ ಕುಲಾಲ್ ಜಿಲ್ಲಾ ನಿರ್ದೇಶಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪದ್ಮನಾಭ ಸಾಲಿಯಾನ್ ಅಧ್ಯಕ್ಷರು, ಪ್ರಾಥಮಿಕ ಕೃಷಿಪತ್ತಿನ ಸೇವಾ ಸಹಕಾರಿ ಬ್ಯಾಂಕ್, ಮಚ್ಚಿನ, ಗ್ರಾ.ಪಂ.ಸದಸ್ಯರುಗಳಾದ ಪ್ರತಿಭಾ ರೈ, ರುಕ್ಕಿಣಿ, ಪ್ರಮೋದ್ ಕುಮಾರ್, ಜಯಶ್ರೀ, ವಿಶ್ವರಾಜ್ ಹೆಗ್ಡೆ, ರವಿಚಂದ್ರ, ರಮ್ಯಶ್ರೀ ಕೆ., ಸೋಮಾವತಿ, ತಾರಾ, ಚೇತನ್, ಶುಭಕರ, ಅಭಿವೃದ್ಧಿ ಅಧಿಕಾರಿ ಗೌರಿ ಶಂಕರ್ ಉಪಸ್ಥಿತರಿದ್ದರು.
ಭಾರತೀಯ ರೆಡ್‌ಕ್ರಾಸ್ ಸೊಸೈಟಿ, ಮಂಗಳೂರು ಇವರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ನಡೆಯಿತು.
ಸನ್ಮಾನ ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡಿದ ಗಣ್ಯರಾದ ನಾರಾಯಣ ನಾವುಡ, ಆನಂದ ದೇವಾಡಿಗ, ಸದಾನಂದ ಹೆಗಡೆ ಇವರನ್ನು ಹಾಗೂ ಹಿಂದೂ ರುದ್ರ ಭೂಮಿ, ಡಿಜಿಟಲ್ ಲೈಬ್ರೆರಿಗೆ ಧನ ಸಹಾಯ ಮಾಡಿದ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಹಿತು.
ರಕ್ತದಾನ ಶಿಬಿರಕ್ಕೆ ಸಂಘ-ಸಂಸ್ಥೆಗಳು, ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘ ಮಚ್ಚಿನ, ವೀರಕೇಸರಿ ಫ್ರೆಂಡ್ಸ್ (ರಿ.) ಬಳ್ಳಮಂಜ, ಉದಯಕಲಾ ಯುವಕ ಮಂಡಲ, ಪಾಲಡ್ಕ ನ್ಯೂ ಫ್ರೆಂಡ್ಸ್ ಕ್ಲಬ್, ಮಚ್ಚಿನ 2, ಶೌರ್ಯ ವಿಪತ್ತು ನಿರ್ವಹಣಾ ಘಟಕ, ಮಡಂತ್ಯಾರು ವಲಯ ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಬಿ.ಸಿ. ಟ್ರಸ್ಟ್ ಗುರುವಾಯನಕೆರೆ, ಸ್ವಾಮಿ ಕೊರಗಜ್ಜ ಪಾಲಡ್ಕ (ಹಗ್ಗಜಗ್ಗಾಟ ತಂಡ), ಶ್ರೀ ಅನಂತೇಶ್ವರ, ಬಳ್ಳಮಂಜ, ಶ್ರೀ ಸಿದ್ಧಿ ವಿನಾಯಕ ಕುತ್ತಿನ, ಶ್ರೀ ಮಹಾಗಣಪತಿ ಕುದ್ರಡ್ಕ, ಶ್ರೀ ದುರ್ಗಾಪರಮೇಶ್ವರೀ ತಾರೆಮಾರು ಈ ಎಲ್ಲಾ ಭಜನಾ ಮಂಡಳಿಗಳು, ಭಾಗ್ಯಶ್ರೀ ಮಿತ್ರ ಮಡಂಳಿ (ರಿ.) ನೆತ್ತರ, ಅಟೋ ಚಾಲಕ-ಮ್ಹಾಲಕರ ಸಂಘ(ರಿ.), ಮಡಂತ್ಯಾರ್ ವಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಮಚ್ಚಿನ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಹಕರಿಸಿದರು.